ಕರ್ನಾಟಕ

karnataka

ETV Bharat / state

ಬೆಳಗಾವಿ: 'ಹಮ್ ದೋ ಹಮಾರೆ ಬಾರಾ' ಸಿನಿಮಾ ವಿರುದ್ಧ ಸಿಡಿದೆದ್ದ ಎಸ್​ಡಿಪಿಐ - Belagavi Protest - BELAGAVI PROTEST

"ಹಮ್ ದೋ ಹಮಾರೆ ಬಾರಾ" ಹಿಂದಿ‌ ಸಿನಿಮಾ‌ ವಿರೋಧಿಸಿ ಬೆಳಗಾವಿಯಲ್ಲಿ ಪ್ರತಿಭಟನೆ ನಡೆದಿದೆ.

Belagavi protest
ಬೆಳಗಾವಿ ಪ್ರತಿಭಟನೆ (ETV Bharat)

By ETV Bharat Karnataka Team

Published : May 31, 2024, 6:31 PM IST

Updated : May 31, 2024, 7:15 PM IST

ಬೆಳಗಾವಿ ಪ್ರತಿಭಟನೆ (ETV Bharat)

ಬೆಳಗಾವಿ: ಜೂನ್ 7 ರಂದು ಬಿಡುಗಡೆಯಾಗುತ್ತಿರುವ "ಹಮ್ ದೋ ಹಮಾರೆ ಬಾರಾ" ಹಿಂದಿ‌ ಸಿನಿಮಾ‌ ವಿರೋಧಿಸಿ ಬೆಳಗಾವಿ ನಗರದಲ್ಲಿ ಎಸ್.ಡಿ.ಪಿ.ಐ. ಸಂಘಟನೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಚನ್ನಮ್ಮ ವೃತ್ತದಲ್ಲಿ ಸೇರಿದ ನೂರಾರು ಎಸ್.ಡಿ.ಪಿ‌.ಐ‌. ಕಾರ್ಯಕರ್ತರು ರಸ್ತೆ ತಡೆ ನಡೆಸಿ, "ಹಮ್ ದೋ ಹಮಾರೆ ಬಾರಾ" ಚಿತ್ರತಂಡದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಾವುದೇ ಕಾರಣಕ್ಕೂ ಚಿತ್ರ ಬಿಡುಗಡೆ ಮಾಡದಂತೆ ಒತ್ತಾಯಿಸಿದರು.

ಇತ್ತಿಚೆಗೆ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದ್ದು, ಇದರಲ್ಲಿ ನಮ್ಮ ಪವಿತ್ರ ಗ್ರಂಥದಲ್ಲಿರುವ ಅಂಶಗಳನ್ನು ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕರು ತಪ್ಪಾಗಿ ಗ್ರಹಿಸಿ, ಅಪಾರ್ಥ ಸೃಷ್ಠಿಸಿದ್ದಾರೆ. ಪ್ರಚೋದನಾತ್ಮಕ ಹಾಗೂ ಅವಹೇಳನಕಾರಿಯಾಗಿ ಚಿತ್ರಿಸಿ ಸಮಾಜದಲ್ಲಿ ಧರ್ಮಗಳ ಮಧ್ಯೆ ಗೊಂದಲ ಉಂಟು ಮಾಡಿದ್ದಾರೆ. ನಮ್ಮ ಧರ್ಮವನ್ನು ತಾಳ್ಮೆಯಿಲ್ಲದ ಧರ್ಮವೆಂದು ತೋರಿಸಲಾಗಿದೆ. ಇದರಿಂದ ಸಮಾಜದಲ್ಲಿ ಸಾಮರಸ್ಯ ಕದಡುವ ಸಾಧ್ಯತೆಯಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಇದನ್ನೂ ಓದಿ:ವೇದಿಕೆಯಲ್ಲಿ ನಟಿಯನ್ನು ತಳ್ಳಿದ ನಂದಮೂರಿ ಬಾಲಕೃಷ್ಣ: ಅಂಜಲಿ ಪ್ರತಿಕ್ರಿಯೆ ಇದು - Anjali

ಡಿಸಿ ಕಚೇರಿವರೆಗೂ ಪ್ರತಿಭಟನಾ ರ‍್ಯಾಲಿ ನಡೆಸಿ, ಸಿನಿಮಾ ಬಿಡುಗಡೆಗೊಳಿಸಬಾರದು ಎಂದು ಒತ್ತಾಯಿಸಿ ಜಿಲ್ಲಾಧಿಕಾರಿ ಮೂಲಕ ಅಖಿಲ ಭಾರತ ಚಿತ್ರೀಕರಣ ಮತ್ತು ವಾಣಿಜ್ಯ ಮಂಡಳಿ, ಚೆನ್ನೈ ಹಾಗೂ ಹಿಂದಿ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಎಸ್.ಡಿ.ಪಿ.ಐ. ಜಿಲ್ಲಾಧ್ಯಕ್ಷ ಮಖಸೂದ್ ಮಕಾನದಾರ್, ನಗರಸೇವಕ ಅಜೀಂ ಪಟ್ವೇಗಾರ್, ಜಾವೇದ್ ಪಟ್ಟೇದಾರ್ ಸೇರಿದಂತೆ ಮತ್ತಿತರರು ಇದ್ದರು.

Last Updated : May 31, 2024, 7:15 PM IST

ABOUT THE AUTHOR

...view details