ಕರ್ನಾಟಕ

karnataka

ಬಳ್ಳಾರಿ: ದಾಖಲೆ ಇಲ್ಲದ ₹5.60 ಕೋಟಿ ನಗದು, 3 ಕೆಜಿ ಚಿನ್ನ, 124 ಕೆಜಿ ಬೆಳ್ಳಿ ಜಪ್ತಿ - Ballari Police Raid

By ETV Bharat Karnataka Team

Published : Apr 7, 2024, 9:52 PM IST

Updated : Apr 8, 2024, 12:11 PM IST

ಬಳ್ಳಾರಿಯ ಕಂಬಳಿ ಬಜಾರ್​ನಲ್ಲಿರುವ ಜ್ಯುವೆಲ್ಲರಿ ಶಾಪ್ ಮಾಲೀಕರೊಬ್ಬರ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ದಾಖಲೆ ಇಲ್ಲದ ಕೋಟ್ಯಂತರ ರೂಪಾಯಿ ಹಣ ಹಾಗು ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ವಶಪಡಿಸಿಕೊಂಡಿದ್ದಾರೆ.

ಚಿನ್ನ, ಬೆಳ್ಳಿ ಮತ್ತು ನಗದು ಜಪ್ತಿ
ಚಿನ್ನ, ಬೆಳ್ಳಿ ಮತ್ತು ನಗದು ಜಪ್ತಿ

ಪೊಲೀಸರ ಹೇಳಿಕೆ

ಬಳ್ಳಾರಿ:ಇಲ್ಲಿನ ಬ್ರೂಸ್‌ಪೇಟೆ ಪೊಲೀಸರು ನಡೆಸಿದ ಭರ್ಜರಿ ಕಾರ್ಯಾಚರಣೆಯಲ್ಲಿ ದಾಖಲೆ ಇಲ್ಲದ 5.60 ಕೋಟಿ ರೂ. ನಗದು ಮತ್ತು ಅಪಾರ ಪ್ರಮಾಣದ ಚಿನ್ನ, ಬೆಳ್ಳಿ ಆಭರಣಗಳನ್ನು ಜಪ್ತಿ ಮಾಡಿದ್ದಾರೆ. ಕಂಬಳಿ ಬಜಾರ್‌ನಲ್ಲಿರುವ ಹೇಮಾ ಜ್ಯುವೆಲ್ಲರಿ ಶಾಪ್ ಮಾಲೀಕರ ಮನೆ ಮೇಲೆ ದಾಳಿ ನಡೆದಿದೆ.

ಒಟ್ಟು 5.60 ಕೋಟಿ ರೂ. ನಗದು, 3 ಕೆ.ಜಿ ಬಂಗಾರ 103 ಕೆ.ಜಿ ಬೆಳ್ಳಿ ಆಭರಣ, 21 ಕೆ.ಜಿ ಕಚ್ಚಾ ಬೆಳ್ಳಿಯನ್ನು ವಶಕ್ಕೆ ಪಡೆಯಲಾಗಿದೆ. ಆರೋಪಿ ಜ್ಯುವೆಲ್ಲರಿ ಶಾಪ್ ಮಾಲೀಕ ನರೇಶ್ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಎಸ್ಪಿ ರಂಜಿತ್ ಕುಮಾರ್ ಬಂಡಾರು, "ವಶಕ್ಕೆ ಪಡೆದ ನಗದು, ಚಿನ್ನ ಮತ್ತು ಬೆಳ್ಳಿಯನ್ನು ಆದಾಯ ತೆರಿಗೆ ಇಲಾಖೆಗೆ ಹಸ್ತಾಂತರಿಸುತ್ತೇವೆ. ಹಣದ ಮೂಲ ಪತ್ತೆಗೆ ವಿಚಾರಣೆ ನಡೆಸಲಾಗುತ್ತದೆ. ನಂತರ ಖಚಿತ ಮಾಹಿತಿ ಲಭ್ಯವಾಗಲಿದೆ. ಡಿವೈಎಸ್ಪಿ ನಂದಾರೆಡ್ಡಿ, ಸಿಪಿಐ ಎಂ.ಎನ್.ಸಿಂಧೂರು ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ" ಎಂದರು.

ಇದನ್ನೂ ಓದಿ:ಬೆಂಗಳೂರು: ಆಂಧ್ರಪ್ರದೇಶ ಮೂಲದ ಉದ್ಯಮಿ ಮೇಲೆ ಐಟಿ ದಾಳಿ

Last Updated : Apr 8, 2024, 12:11 PM IST

ABOUT THE AUTHOR

...view details