ಬೆಂಗಳೂರು: ಎಪಿಎಲ್ ಕಾರ್ಡುಗಳ ರದ್ಧತಿಗೆ ಯಾವುದೇ ಸೂಚನೆ ನೀಡಿಲ್ಲ ಹಾಗೂ ಯಾವುದೇ ಎಪಿಎಲ್ ಕಾರ್ಡುಗಳನ್ನು ರದ್ದುಗೊಳಿಸಿಲ್ಲ ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ ಸ್ಪಷ್ಟೀಕರಣ ನೀಡಿದೆ.
ಈ ಸಂಬಂಧ ಇಲಾಖೆ ಪತ್ರಿಕಾ ಪ್ತಕಟಣೆ ಹೊರಡಿಸಿದ್ದು, ಮಾಧ್ಯಮಗಳಲ್ಲಿ ಇ - ಕೆವೈಸಿ ನೋಂದಣಿ ಮಾಡಿಕೊಳ್ಳದ ಎಪಿಎಲ್ ಕಾರ್ಡುಗಳನ್ನು ರದ್ದುಗೊಳಿಸಲಾಗುತ್ತಿದೆ ಎಂದು ವರದಿಯಾಗಿರುವುದು ಸತ್ಯಕ್ಕೆ ದೂರವಾಗಿದೆ. ರಾಜ್ಯದಲ್ಲಿ ಕಳೆದ ಸೆಪ್ಟೆಂಬರ್ 2 ರಂದು 25,13,798 ಎಪಿಎಲ್ ಕಾರ್ಡುಗಳಿದ್ದವು. ಇಂದು ನವೆಂಬರ್ 16ರಂದು 25,62,566 ಕಾರ್ಡುಗಳಿವೆ ಎಂದಿದೆ.