ನೆಲಮಂಗಲ:ಬಿರುಗಾಳಿ ಮಳೆಗೆ ಮನೆಯ ಗೇಟ್ ತುಂಡಾಗಿ ಬಿದ್ದ ಪರಿಣಾಮ ಅಂಗಳದಲ್ಲಿ ಆಟವಾಡುತ್ತಿದ್ದ ಬಾಲಕಿ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ತಾಲೂಕಿನ ವಾಜರಹಳ್ಳಿಯಲ್ಲಿ ಗುರುವಾರ ಸಂಜೆ ನಡೆದಿದೆ. ಯಲ್ಲಮ್ಮ (7) ಮೃತ ಬಾಲಕಿ.
ಎಂದಿನಂತೆ ಬಾಲಕಿ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದಳು. ಆದರೆ, ಈ ವೇಳೆ ಬಿರುಗಾಳಿ ಮಳೆಯ ಹೊಡೆತಕ್ಕೆ ಗೇಟ್ ಹಠಾತ್ ತುಂಡಾಗಿ ಬಾಲಕಿಯ ಮೇಲೆ ರಭಸವಾಗಿ ಬಿದ್ದಿದೆ. ಗೇಟ್ ಕೆಳಗೆ ಸಿಲುಕಿದ ಬಾಲಕಿ ಯಲ್ಲಮ್ಮ ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾಳೆ.