ಉಡುಪಿ:ಫ್ರಾನ್ಸ್ನ ಯುರೆಕ್ಸ್ಪೋ ಲಿಯಾನ್ನಲ್ಲಿ ಸೆ.10ರಿಂದ 15ರವರೆಗೆ ನಡೆದ 47ನೇ ವಿಶ್ವ ಕೌಶಲ್ಯ ಸ್ಪರ್ಧೆಯ ಅಡುಗೆ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಮಣಿಪಾಲ ವ್ಯಾಗ್ಶದ ಬಿಎ ಪಾಕಶಾಲೆಯ ವಿದ್ಯಾರ್ಥಿ ಹರ್ಷವರ್ಧನ್ ಅವರಿಗೆ 'ಮೆಡಾಲಿಯನ್ ಆಫ್ ಎಕ್ಸಲೆನ್ಸ್' ಪ್ರಶಸ್ತಿ ಸಿಕ್ಕಿದೆ.
ಅಡುಗೆ ವಿಭಾಗದಲ್ಲಿ 70ಕ್ಕೂ ಹೆಚ್ಚು ದೇಶಗಳಿಂದ 1,400 ಸ್ಪರ್ಧಿಗಳು ಭಾಗವಹಿಸಿದ್ದರು. ಭಾರತ 60 ಸ್ಪರ್ಧಿಗಳೊಂದಿಗೆ 52 ಕೌಶಲ್ಯಗಳಲ್ಲಿ ಸ್ಪರ್ಧಿಸಿ 3 ಕಂಚು ಮತ್ತು 12 ಮೆಡಾಲಿಯನ್‌ಗಳನ್ನು ಗೆದ್ದುಕೊಂಡಿದೆ.