ಕರ್ನಾಟಕ

karnataka

By ETV Bharat Karnataka Team

Published : Mar 21, 2024, 4:19 PM IST

Updated : Mar 21, 2024, 5:11 PM IST

ETV Bharat / state

ವಿರೋಧ ಪಕ್ಷದ ಆರೋಪಗಳಿಗೆ ತಲೆಕೆಡಿಸಿಕೊಳ್ಳದೇ ಅಭಿವೃದ್ಧಿ ಮೇಲೆ ಚುನಾವಣೆ ಎದುರಿಸುವೆ: ಬಿ ವೈ ರಾಘವೇಂದ್ರ - B Y RAGHAVENDRA

ಈವರೆಗೆ ಸಂಸದನಾಗಿ ಶಿವಮೊಗ್ಗ ಜಿಲ್ಲೆಗೆ ಏನು ಕೊಡುಗೆ ಕೊಟ್ಟಿದ್ದೇನೆ ಎಂಬುದು ಜನರಿಗೆ ಗೊತ್ತಿದೆ ಎಂದು ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಅವರು ಸಚಿವ ಮಧು ಬಂಗಾರಪ್ಪ ಅವರಿಗೆ ತಿರುಗೇಟು ನೀಡಿದರು.

BJP candidate B Y Raghavendra spoke to the media.
ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ಮಾಧ್ಯಮದವರೊಂದಿಗೆ ಮಾತನಾಡಿದರು.

ವಿರೋಧ ಪಕ್ಷದ ಆರೋಪಗಳಿಗೆ ತಲೆಕೆಡಿಸಿಕೊಳ್ಳದೇ ಅಭಿವೃದ್ಧಿ ಮೇಲೆ ಚುನಾವಣೆ ಎದುರಿಸುವೆ: ಬಿ ವೈ ರಾಘವೇಂದ್ರ

ಶಿವಮೊಗ್ಗ: ನಾನು ವಿರೋಧ ಪಕ್ಷಗಳ ಆರೋಪದ ಬಗ್ಗೆ ತಲೆಕೆಡಿಸಿಕೊಳ್ಳದೆ, ಅಭಿವೃದ್ಧಿ ಮೇಲೆ ಚುನಾವಣೆ ಎದುರಿಸುತ್ತೇನೆ ಎಂದು ಬಿಜೆಪಿ ಅಭ್ಯರ್ಥಿ ಬಿ ವೈ ರಾಘವೇಂದ್ರ ತಿಳಿಸಿದ್ದಾರೆ.

ನಗರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚುನಾವಣೆ ನೀತಿ ಸಂಹಿತೆ ಜಾರಿ ಹಾಗೂ ಪ್ರಧಾನಿಯವರ ಸಭೆ ಆದ ಮೇಲೆ ನಮ್ಮ‌ ಕಾರ್ಯಕರ್ತರಲ್ಲಿ ಉತ್ಸಾಹ ಬಂದಿದೆ.‌ ಈಗಾಗಲೇ ಬೂತ್ ಮಟ್ಟದಲ್ಲಿ ತಮ್ಮ‌ ಕೆಲಸ ಪ್ರಾರಂಭಿಸಿದ್ದಾರೆ. ಈಗ ನಮ್ಮ ವಿರೋಧ ಪಕ್ಷದ ನಾಯಕರುಗಳು ನಮ್ಮ ಮೇಲೆ ಹಗುರವಾಗಿ ಮಾತನಾಡುತ್ತಿದ್ದಾರೆ. ಅವರ ಆರೋಪಗಳಲ್ಲಿ ಸತ್ಯವಿಲ್ಲ. ಅವರ ಆರೋಪಗಳ ಬಗ್ಗೆ ನಾನು ತಲೆಕೆಡಿಸಿಕೊಳ್ಳುತ್ತಿಲ್ಲ ಎಂದರು.

ನಾನು ನಮ್ಮ ಅಭಿವೃದ್ಧಿಯ ಮೇಲೆ ಚುನಾವಣೆ ಎದುರಿಸುತ್ತಿದ್ದೇನೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಯಾಗಬೇಕು. ಇಲ್ಲಿ ನಾನು ಎಂಪಿ ಅಗುವುದು ಪ್ರಶ್ನೆ ಅಲ್ಲ, ಹಿಂದೆ ಐದು ವರ್ಷ ಏನು ಮಾಡಿದ್ವಿ, ಮುಂದೆ ಏನು ಮಾಡುತ್ತೇವೆ ಅನ್ನೋದರ ಮೇಲೆ ಚುನಾವಣೆಯ ಭವಿಷ್ಯ ನಿಂತಿದೆ. ಅದನ್ನು ಬಿಟ್ಟರೆ ಮತದಾರರಿಗೆ ಏನು ಉಪಯೋಗ ಆಗಲ್ಲ. ನಾನು ಸಮಾಧಾನದಿಂದ ಎಲ್ಲವನ್ನು ನೋಡುತ್ತಿದ್ದೇನೆ. ಸಮಯ ಬಂದಾಗ ಎಲ್ಲಾದಕ್ಕೂ ಉತ್ತರ ಕೊಡುತ್ತೇನೆ ಎಂದು ತಿಳಿಸಿದರು.

ಮಧು ಬಂಗಾರಪ್ಪ ಹಗುರವಾಗಿ ಮಾತನಾಡುವುದನ್ನು ನಿಲ್ಲಿಸಬೇಕು: ಕಾಂಗ್ರೆಸ್​ ನಾಯಕ, ಸಚಿವ ಮಧು ಬಂಗಾರಪ್ಪ ಹಗುರವಾಗಿ ಮಾತನಾಡುವ ಪ್ರಯತ್ನ ಮಾಡಿದ್ದಾರೆ. ಶರಾವತಿ ಮುಳುಗಡೆ, ವಿಎಸ್ ಎನ್ ಎಲ್, ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. ಅವರ ಮಾತನ್ನು ಕೇಳಿದ್ರೆ, ನನಗೆ ನಗು ಬರುತ್ತದೆ. ಅವರು ಯಾವ ನೈತಿಕತೆ ಮೇಲೆ ಪ್ರಶ್ನೆ ಕೇಳುತ್ತಿದ್ದಾರೆ. ನಾನು ಸಂಸದನಾಗಿ ಕ್ಷೇತ್ರಕ್ಕೆ ಏನು ಮಾಡಿದ್ದೇನೆ ಎಂಬುದರ ಬಗ್ಗೆ ಶ್ವೇತ ಪತ್ರದ ರೀತಿ ಹ್ಯಾಂಡ್ ಬಿಲ್ ಮಾಡಿಸಿ, ಜನರಿಗೆ ನೀಡುತ್ತಿದ್ದೇನೆ. ಅದನ್ನು ಅವರು‌ ಓದಿದ್ರೆ ಸಾಕು. ಅರ್ಥ ಆಗುತ್ತದೆ ಎಂದು ಟಾಂಗ್​ ಕೊಟ್ಟರು.

ವಿಜಯೇಂದ್ರ ಸಮರ್ಥ ನಾಯಕ: ಮಾಜಿ ಸಚಿವ ಈಶ್ವರಪ್ಪ ಅವರು ನಾಲ್ಕೈದು ಸಲ ಶಾಸಕರಾಗಿದ್ದಾರೆ. ಸಹಜವಾಗಿ ಅವರಿಗೆ ಜನ ಬೆಂಬಲ‌ ಇರುತ್ತದೆ. ಯಾರ ಹಣೆಬರಹದಲ್ಲಿ ಏನ್ ಬರೆದಿರುತ್ತದೆಯೋ ಅದೇ ಆಗುತ್ತದೆ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗುತ್ತಾರೆ ಎಂದು ಅಂದು‌ಕೊಂಡಿರಲಿಲ್ಲ. ವಿಜಯೇಂದ್ರ ರಾಜ್ಯಾಧ್ಯಕ್ಷರಾಗಿ ಆಯ್ಕೆ ಆದ ವಿಚಾರ ಅಂದು ಫೋನ್ ಬಂದಾಗಲೇ ನಮಗೂ ತಿಳಿದಿದ್ದು. ಇಂದು ಒಬ್ಬ ವಿಜಯೇಂದ್ರ ಯುವ ನಾಯಕ. ರಾಜ್ಯದಲ್ಲಿ ಪಕ್ಷ ಕಟ್ಟುವ ಕೆಲಸವನ್ನು ಅವರು ಮಾಡುತ್ತಾರೆ ಎಂದರು.

ಇದನ್ನೂಓದಿ:ಕೈ ತಪ್ಪಿದ ಬಜೆಪಿ ಟಿಕೆಟ್​: ಕೊಪ್ಪಳದಲ್ಲಿ ಸಂಸದ ಸಂಗಣ್ಣ ಕರಡಿ ಸ್ವಾಭಿಮಾನಿ ಸಮಾವೇಶ - MP SANGANNA KARADI

Last Updated : Mar 21, 2024, 5:11 PM IST

ABOUT THE AUTHOR

...view details