ಕರ್ನಾಟಕ

karnataka

ETV Bharat / state

ಹೊಗೆನಕಲ್​ನಲ್ಲಿ ಕಾವೇರಿ ರುದ್ರ ನರ್ತನ: ಪ್ರವಾಸಿಗರಿಗೆ ನೋ ಎಂಟ್ರಿ - No entry for tourists - NO ENTRY FOR TOURISTS

ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿರುವುದರಿಂದ ನೀರಿನ ಹರಿವು ಕಡಿಮೆಯಾಗುವ ತನಕ ಹೊಗೆನಕಲ್​ಗೆ ಪ್ರವಾಸಿಗರಿಗೆ ಪ್ರವೇಶ ಇರುವುದಿಲ್ಲ ಎಂದು ಅರಣ್ಯ ಇಲಾಖೆ ತಿಳಿಸಿದೆ.

Heavy Water flow in Kaveri at Hogenakkal: No entry for tourists
ಹೊಗೆನಕಲ್​ನಲ್ಲಿ ಕಾವೇರಿ ರುದ್ರ ನರ್ತನ: ಪ್ರವಾಸಿಗರಿಗೆ ನೋ ಎಂಟ್ರಿ (ETV Bharat)

By ETV Bharat Karnataka Team

Published : Jul 19, 2024, 9:49 PM IST

Updated : Jul 19, 2024, 10:59 PM IST

ಚಾಮರಾಜನಗರ: ಭಾರತದ ನಯಾಗರ ಎಂದೇ ಕರೆಯುವ ಕರ್ನಾಟಕ ಮತ್ತು ತಮಿಳುನಾಡು ಗಡಿಯಾದ ಹನೂರು ತಾಲೂಕಿನ ಹೊಗೆನಕಲ್ ಜಲಪಾತದಲ್ಲಿ ಅಪಾಯ ಮಟ್ಟದಲ್ಲಿ ನೀರು ಭೋರ್ಗರೆಯುತ್ತಿದೆ. ಕಬಿನಿ ಹೊರಹರಿವು ಮತ್ತು ಭಾರಿ ಮಳೆಯಿಂದ ಹೊಗೆನಕಲ್​ನಲ್ಲಿ ಕಾವೇರಿ ರೌದ್ರ ನರ್ತನವಾಡುತ್ತಿದ್ದಾಳೆ. ಮುನ್ನೆಚ್ಚರಿಕೆ ಕ್ರಮವಾಗಿ ಕಾವೇರಿ ವನ್ಯಜೀವಿಧಾಮವು ಜು.20 ರಿಂದ ಹೊಗೆನಕಲ್​ಗೆ ಪ್ರವಾಸಿಗರಿಗೆ ನಿರ್ಬಂಧ ಹೇರಿದೆ.

ಹೊಗೆನಕಲ್​ನಲ್ಲಿ ಕಾವೇರಿ ರುದ್ರ ನರ್ತನ: ಪ್ರವಾಸಿಗರಿಗೆ ನೋ ಎಂಟ್ರಿ (ETV Bharat)

ಈಗಾಗಲೇ ಕಬಿನಿಯಿಂದ 70 ಸಾವಿರ ಕ್ಯೂಸೆಕ್ ಹೊರಹರಿವಿದ್ದು ಹೊಗೆನಕಲ್​ನಲ್ಲಿ ಕಾವೇರಿ ರಭಸದಿಂದ ಹರಿಯುತ್ತಿದೆ. ಅಪಾಯಕಾರಿ ಮಟ್ಟದಲ್ಲಿ ನೀರು ಹರಿಯುತ್ತಿರುವುದರಿಂದ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ‌. ನೀರಿನ ಹರಿವು ಕಡಿಮೆಯಾಗುವ ತನಕ ಹೊಗೆನಕಲ್​ಗೆ ಪ್ರವಾಸಿಗರಿಗೆ ಪ್ರವೇಶ ಇರುವುದಿಲ್ಲ. ತಾತ್ಕಾಲಿಕ ನಿರ್ಬಂಧ ಇದ್ದು ಅದಾದ ಬಳಿಕ ಮುಂದಿನ ಕ್ರಮ‌ ಕೈಗೊಳ್ಳುತ್ತೇವೆ ಎಂದು ಹೊಗೆನಕಲ್ ಆರ್​ಎಫ್​ಒ ಸಂಪತ್ ಪಟೇಲ್ ತಿಳಿಸಿದ್ದಾರೆ.

ಕರ್ನಾಟಕ, ತಮಿಳುನಾಡು ಎರಡೂ ರಾಜ್ಯದ ಸಾವಿರಾರು ಪ್ರವಾಸಿಗರು ನಿತ್ಯ ಭೇಟಿ ಕೊಡುವ ಜನಪ್ರಿಯ ಜಲಪಾತ ಇದಾಗಿದ್ದು, ಕಳೆದ 4 ದಿನದಿಂದ ತಮಿಳುನಾಡು ಭಾಗದಲ್ಲಿ ಬೋಟಿಂಗ್, ಪ್ರವಾಸಿಗರಿಗೆ ನಿರ್ಬಂಧ ಹೇರಿದೆ. ಜು.20 ರಿಂದ ಕರ್ನಾಟಕದ ಭಾಗದಲ್ಲೂ ಪ್ರವಾಸಿಗರಿಗೆ ನಿರ್ಬಂಧ ಇರಲಿದೆ.

ಇದನ್ನೂ ಓದಿ:ಮೈದುಂಬಿ ಧುಮ್ಮಿಕ್ಕುತ್ತಿರುವ ಭರಚುಕ್ಕಿ ಜಲಪಾತ: ಕಾವೇರಿ ನದಿ ಪಾತ್ರದ ಜನರಿಗೆ ಪ್ರವಾಹದ ಆತಂಕ - FLOOD THREAT FROM Cauvery RIVER

Last Updated : Jul 19, 2024, 10:59 PM IST

ABOUT THE AUTHOR

...view details