ಕರ್ನಾಟಕ

karnataka

ETV Bharat / state

ಬೆಂಗಳೂರು: ಪೊಲೀಸ್ ಶಸ್ತ್ರಾಗಾರಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ದಾಂಧಲೆ; ಎಫ್ಐಆರ್ ದಾಖಲು - ಪೊಲೀಸ್ ಶಸ್ತ್ರಾಗಾರಕ್ಕೆ ಪ್ರವೇಶ

ಉಳ್ಳಾಲ ಉಪನಗರದಲ್ಲಿರುವ ಸಿಎಆರ್ ಪಶ್ಚಿಮ ವಿಭಾಗದ ಜಾಗಕ್ಕೆ ಅತಿಕ್ರಮವಾಗಿ ಪ್ರವೇಶಿಸಿ 20 ಜನಕ್ಕೂ ಹೆಚ್ಚು ಆರೋಪಿಗಳು ದಾಂಧಲೆ ನಡೆಸಿದ್ದಾರೆ ಎಂದು ದೂರಲಾಗಿದೆ.

ಎಫ್ಐಆರ್ ದಾಖಲು
ಎಫ್ಐಆರ್ ದಾಖಲು

By ETV Bharat Karnataka Team

Published : Feb 12, 2024, 10:59 AM IST

ಬೆಂಗಳೂರು :ಸರ್ಕಾರಿ ಜಾಗದಲ್ಲಿರುವ ಪೊಲೀಸ್ ಶಸ್ತ್ರಾಗಾರಕ್ಕೆ ನುಗ್ಗಿ ದಾಂಧಲೆ ಸೃಷ್ಟಿಸಿ, ಕರ್ತವ್ಯಕ್ಕೆ ಅಡ್ಡಿಪಡಿಸಿದ ಅಪರಿಚಿತರ ವಿರುದ್ಧ ಜ್ಞಾನಭಾರತಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಉಳ್ಳಾಲ ಉಪನಗರದಲ್ಲಿರುವ ಸಿಎಆರ್ ಪಶ್ಚಿಮ ವಿಭಾಗದ ಜಾಗಕ್ಕೆ ಅತಿಕ್ರಮವಾಗಿ ಪ್ರವೇಶಿಸಿ ಆರೋಪಿಗಳು ದಾಂಧಲೆ ಮಾಡಿದ್ದರು.

ಫೆಬ್ರವರಿ 8ರಂದು ಸಿಎಆರ್ ಪಶ್ಚಿಮ ವಿಭಾಗದ ಶಸ್ತ್ರಾಗಾರದ ಬಳಿ ಬಂದಿದ್ದ 15 - 20 ಜನ ಆರೋಪಿಗಳು 'ಇದು ನಮಗೆ ಸೇರಿದ ಜಾಗ, ನೀವು ಜಾಗ ಖಾಲಿ ಮಾಡಬೇಕು' ಎಂದಿದ್ದರು. ಈ ಸಂದರ್ಭದಲ್ಲಿ ಕರ್ತವ್ಯದಲ್ಲಿದ್ದ ಕಾನ್ಸ್‌ಟೇಬಲ್ ರುದ್ರೇಶ್ ನಾಯ್ಕ್, 'ನಮ್ಮ ಹಿರಿಯ ಅಧಿಕಾರಿಗಳೊಂದಿಗೆ ಮಾತನಾಡಿ, ನನ್ನೊಂದಿಗೆ ಯಾಕೆ ದರ್ಪದಿಂದ ಮಾತನಾಡುತ್ತಿದ್ದೀರಿ?' ಎಂದು ಪ್ರಶ್ನಿಸಿದಾಗ ಸಮವಸ್ತ್ರದಲ್ಲಿದ್ದ ಅವರ ಬಟ್ಟೆಯನ್ನು ಎಳೆದಾಡಿದ್ದರು. ಹೊರಗಡೆ ಬಂದಾಗ ಸಹ 60-70 ಜನ ಜೆಸಿಬಿ, ಕ್ಯಾಂಟರ್, ಲಾರಿ, ಟ್ಯಾಂಕರ್​ಗಳೊಂದಿಗೆ ಸಿದ್ದವಾಗಿ ಬಂದಿದ್ದು, ತಮಗೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಘಟನೆ ಕುರಿತು‌ ಸಿಎಆರ್ ಕಾನ್ಸ್‌ಟೇಬಲ್ ನೀಡಿದ ದೂರಿನನ್ವಯ ಅಪರಿಚಿತರ ವಿರುದ್ಧ ಜ್ಞಾನಭಾರತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ :ಡಿಕೆಶಿ ವಿರುದ್ಧ ಎಫ್​ಐಆರ್​ ದಾಖಲಿಸಿ ತನಿಖೆ ನಡೆಸಲು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರ್ದೇಶನ

ABOUT THE AUTHOR

...view details