ಕರ್ನಾಟಕ

karnataka

ETV Bharat / state

ಅಕ್ರಮವಾಗಿ ಸೀರೆ ಸಂಗ್ರಹ ಆರೋಪ; ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ದೂರು ದಾಖಲು - CASE REGISTRED - CASE REGISTRED

ಮತದಾರರಿಗೆ ಸೀರೆ ಹಂಚಿಕೆ ಆರೋಪಕ್ಕೆ ಸಂಬಂಧಿಸಿದಂತೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ದೂರು ದಾಖಲಾಗಿದೆ.

ಶಾಸಕ ಇಕ್ಬಾಲ್ ಹುಸೇನ್
ಶಾಸಕ ಇಕ್ಬಾಲ್ ಹುಸೇನ್

By ETV Bharat Karnataka Team

Published : Mar 24, 2024, 10:55 PM IST

ರಾಮನಗರ :ಲೋಕಸಭಾಚುನಾವಣೆ ಹಿನ್ನೆಲೆ ಮತದಾರರಿಗೆ ಹಂಚುವ ಉದ್ದೇಶದಿಂದ ಅಕ್ರಮವಾಗಿ ಸೀರೆಗಳನ್ನು ಸಂಗ್ರಹಿಸಲಾಗಿದೆ ಎಂಬ ಆರೋಪದ ಮೇಲೆ ರಾಮನಗರ ಶಾಸಕ ಇಕ್ಬಾಲ್ ಹುಸೇನ್ ವಿರುದ್ಧ ದೂರು ದಾಖಲಾಗಿದೆ.

ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಶಾಸಕರ ಬೆಂಬಲಿಗ ಅನಿಲ್ ವಿರುದ್ಧವೂ ರಾಮನಗರ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಇದೀಗ ಆರೋಪಿಗಳ ಪಟ್ಟಿಗೆ ಶಾಸಕರು ಮತ್ತು ಅವರ ಪತ್ನಿಯ ಹೆಸರನ್ನು ತಡವಾಗಿ ಸೇರಿಸಲಾಗಿದೆ‌.

ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ? :ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರು ನೀಡಿದ ಮಾಹಿತಿ ಆಧಾರದ ಮೇರೆಗೆ ರಾಮನಗರದ 1ನೇ ವಾರ್ಡ್ ನಲ್ಲಿರುವ ಖಾಸಗಿ ಕಂಪನಿಯ ಲಾಜಿಸ್ಟಿಕ್ಸ್ ನಲ್ಲಿ ಸಾವಿರಾರು ಸೀರೆಗಳನ್ನು ಸಂಗ್ರಹಿಸಿಟ್ಟಿರುವುದನ್ನು ಪೊಲೀಸರು ಪರಿಶೀಲಿಸಿದ್ದರು. ಗುಜರಾತ್​ನ ಸೂರತ್ ನಿಂದ ರಾಮನಗರಕ್ಕೆ ಖಾಸಗಿ ಟ್ರಾನ್ಸ್​ಪೋರ್ಟ್​ ಮೂಲಕ ಸೀರೆ ಮತ್ತು ಚೂಡಿದಾರ್​ಗಳನ್ನು ತರಿಸಿಕೊಳ್ಳಲಾಗಿತ್ತು. ದಾಖಲೆಗಳ ಪ್ರಕಾರ ಅಂದಾಜು 14 ಲಕ್ಷ ಮೌಲ್ಯದ ಸೀರೆಗಳನ್ನು ತರಿಸಲಾಗಿತ್ತು. ಸ್ಥಳದಲ್ಲಿ ದೊರೆತ ಸೀರೆಗಳನ್ನು ಪೊಲೀಸರು ತಮ್ಮ ವಶದಲ್ಲಿಸಿಕೊಂಡಿದ್ದರು. ಕೊರಿಯರ್ ಬಿಲ್, ಜಿಎಸ್​ಟಿ ದಾಖಲೆಗಳು, ಕೊರಿಯರ್ ಸ್ವೀಕರಿಸಿದವರ ಮಾಹಿತಿ ಆಧರಿಸಿ ಅನಿಲ್ ಮತ್ತು ಎನ್​ಎಂ ಗ್ರಾನೈಟ್ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ದಾಖಲೆ ಬಿಡುಗಡೆ ಮಾಡಿದ ನಿಖಿಲ್​ ಕುಮಾರಸ್ವಾಮಿ : ಮತ್ತೊಂದೆಡೆ ರಾಮನಗರದಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ಬಿಜೆಪಿ-ಜೆಡಿಎಸ್ ಜಂಟಿ ಸುದ್ದಿಗೋಷ್ಠಿ ನಡೆಯಿತು. ಈ ವೇಳೆ ಜೆಡಿಎಸ್​ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ಎನ್​ಎಂ ಗ್ರಾನೈಟ್ಸ್ ಕಂಪನಿ ಶಾಸಕರಿಗೆ ಸೇರಿರುವುದು ಎಂದು ದಾಖಲೆ ಸಮೇತ ಫೋಟೋ ಬಿಡುಗಡೆ ಮಾಡಿದರು. 15-20 ದಿನದಿಂದ ಕುಕ್ಕರ್, ಸೀರೆಗಳನ್ನು ಹಂಚಲಾಗುತ್ತಿದೆ. ಮಾಹಿತಿ ನೀಡಿದರೂ ಕೂಡ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಏನು ಮಾಡುತ್ತಿದೆ?. ಚುನಾವಣಾ ಆಯೋಗ ಪಾರದರ್ಶಕವಾಗಿ ಕೆಲಸ ಮಾಡುತ್ತಿದೀಯಾ? ಎಂದು ಜಿಲ್ಲಾಡಳಿತಕ್ಕೆ ಪ್ರಶ್ನೆ ಮಾಡಿದರು.

ರಾಜ್ಯ ಚುನಾವಣಾ ಆಯೋಗಕ್ಕೆ ನಾನು ಒತ್ತಾಯ ಮಾಡುತ್ತೇನೆ. ನೀವು ಪಾರದರ್ಶಕವಾಗಿ ಚುನಾವಣೆ ಮಾಡಿ. ಪ್ರಜಾಪ್ರಭುತ್ವಕ್ಕೆ ದಕ್ಕೆ ತರುವ ಕೆಲಸ ಆಗುತ್ತಿದೆ. ಚುನಾವಣೆ ಆಯೋಗಕ್ಕೆ ಇಂದು ನಾನು ದೂರು ನೀಡುತ್ತಿದ್ದೇನೆ. ರಾಜ್ಯದ ಜನತೆಗೆ ಪಾರದರ್ಶಕ ಚುನಾವಣೆ ನಡೆಯುತ್ತಾ ಎಂಬ ಸಂಶಯ ಬರುತ್ತಿದೆ. ಅಕ್ರಮವಾಗಿ ಹಣ ಲೂಟಿ ಮಾಡಿ ಚುನಾವಣೆ ಅಕ್ರಮ ಮಾಡುತ್ತಿದ್ದಾರೆ. ಬಿಜೆಪಿ - ಜೆಡಿಎಸ್ ಕಾರ್ಯಕರ್ತರ ಜೊತೆ ನಾನು ಸದಾ ಇರುತ್ತೇನೆ. ನಿಮ್ಮ ಹೋರಾಟಕ್ಕೆ ಯಾವ ಸಮಯದಲ್ಲೂ ನಾನು ಜೊತೆ ನಿಲ್ಲುತ್ತೇನೆ ಎಂದು ನಿಖಿಲ್​ ಕುಮಾರಸ್ವಾಮಿ ಹೇಳಿದರು. ಇತ್ತ ಮಾಗಡಿ ಶಾಸಕ ಬಾಲಕೃಷ್ಣ ಈ ಪ್ರಕರಣ ಜೆಡಿಎಸ್-ಬಿಜೆಪಿಯವರ ನಾಟಕ ಎಂದು ಆರೋಪವನ್ನು ನಿರಾಕರಿಸಿದ್ದರು.

ಇದನ್ನೂ ಓದಿ :ರಾಜ್ಯದಲ್ಲಿ ಚುನಾವಣಾ ಆಯೋಗ ಪಾರದರ್ಶಕವಾಗಿ ಕೆಲಸ ಮಾಡ್ತಿದಿಯಾ?: ನಿಖಿಲ್ ಕುಮಾರಸ್ವಾಮಿ ಪ್ರಶ್ನೆ

ABOUT THE AUTHOR

...view details