ಕರ್ನಾಟಕ

karnataka

ETV Bharat / state

ಗಣೇಶ ಚತುರ್ಥಿ ಖರ್ಚಿನ ವಿಚಾರವಾಗಿ ಸಹೋದರರ ಗಲಾಟೆ, ಓರ್ವನ ಕೊಲೆ - Karwar Murder Case - KARWAR MURDER CASE

ಗಣೇಶ ಚತುರ್ಥಿ ಹಬ್ಬದ ಖರ್ಚಿನ ಲೆಕ್ಕಾಚಾರದ ವಿಚಾರವಾಗಿ ಸಹೋದರರ ನಡುವೆ ನಡೆದ ಗಲಾಟೆ ಓರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆ ಕಾರವಾರದಲ್ಲಿ ನಡೆದಿದೆ.

ಸಂದೇಶ್​ ಪ್ರಭಾಕರ ಬೋರ್ಕರ್ ಕೊಲೆಯಾದ ಯುವಕ
ಸಂದೇಶ್​ ಪ್ರಭಾಕರ ಬೋರ್ಕರ್- ಕೊಲೆಯಾದ ಯುವಕ (ETV Bharat)

By ETV Bharat Karnataka Team

Published : Sep 8, 2024, 5:58 PM IST

ಕಾರವಾರ(ಉತ್ತರ ಕನ್ನಡ): ಕಳೆದ ವರ್ಷದ ಗಣೇಶ ಚತುರ್ಥಿ ಹಬ್ಬದ ಖರ್ಚಿನ ಲೆಕ್ಕಾಚಾರದ ವಿಚಾರವಾಗಿ ಸಹೋದರರ ನಡುವೆ ನಡೆದ ಗಲಾಟೆ ಕೊಲೆಯಲ್ಲಿ ಅಂತ್ಯವಾದ ಘಟನೆ ಕಾರವಾರದ ಸಾಯಿಕಟ್ಟಾ ಬಿಂದು ಮಾಧವ ದೇವಸ್ಥಾನದ ಬಳಿ ಶನಿವಾರ ನಡೆಯಿತು. ಸಂದೇಶ್​ ಪ್ರಭಾಕರ ಬೋರ್ಕರ್ ಕೊಲೆಯಾದ ಯುವಕ. ಸಂದೇಶ್‌ನ ಚಿಕ್ಕಪ್ಪನ ಮಗ ಮನೀಶ್ ಬೋರ್ಕರ್ ಕೊಲೆ ಆರೋಪಿ.

ಚಾಕು ಇರಿದ ಆರೋಪದ ಮೇರೆಗೆ ಪೊಲೀಸರು, ಮನೀಶ್ ಬೋರ್ಕರ್ ಮತ್ತು ಇನ್ನೂ ಕೆಲವರನ್ನು ವಶಕ್ಕೆ ಪಡೆದಿದ್ದಾರೆ.

ಪ್ರತಿವರ್ಷ ಬೋರ್ಕರ್ ಕುಟುಂಬಸ್ಥರು ಚತುರ್ಥಿಯಂದು ಮನೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ ಪೂಜೆ ಮಾಡಿಕೊಂಡು ಬರುತ್ತಿದ್ದರು. ಶನಿವಾರ ಮಧ್ಯಾಹ್ನ ಗಣಪತಿ ಪೂಜೆ ನಂತರ ಪ್ರಭಾಕರ್ ಹಾಗೂ ಮನೋಹರ್ ಬೋರ್ಕರ್ ನಡುವೆ ಕಳೆದ ವರ್ಷದ ಹಬ್ಬಕ್ಕೆ ಖರ್ಚು ಮಾಡಿದ ಹಣದ ಲೆಕ್ಕಾಚಾರದ ಗಲಾಟೆ ಕೊಲೆಯಲ್ಲಿ ಅಂತ್ಯ ಕಂಡಿದೆ.

ಇದನ್ನೂ ಓದಿ:ಶಿವಮೊಗ್ಗ: ಗಣೇಶ ಹಬ್ಬದಲ್ಲಿ ಡೊಳ್ಳು ಬಾರಿಸುವ ವಿಚಾರವಾಗಿ ಗಲಾಟೆ, ಕಲ್ಲು ತೂರಾಟ - Ganesh Festival

ABOUT THE AUTHOR

...view details