ಕರ್ನಾಟಕ

karnataka

ETV Bharat / state

ಬಳ್ಳಾರಿಗೆ ಶಿಫ್ಟ್​ ಆಗಲಿರುವ ಆರೋಪಿ ದರ್ಶನ್​: 'ದಾಸ'ನ ದರ್ಶನಕ್ಕಾಗಿ ಜೈಲಿಗೆ ಬಂದು ಕಾಯುತ್ತಿರುವ ಅಭಿಮಾನಿಗಳು - Fans are waiting to see Darshan - FANS ARE WAITING TO SEE DARSHAN

24ನೇ ಎಸಿಎಂಎಂ ನ್ಯಾಯಾಲಯದ ಆದೇಶದಂತೆ ಬಳ್ಳಾರಿಯ ಜೈಲ್​ಗೆ ದರ್ಶನ್​ ಶಿಫ್ಟ್​ ಆಗಲಿರುವ ಸುದ್ದಿ ಬಂದಂತೆ ಅಭಿಮಾನಿಗಳು ದರ್ಶನ್ ಅವರ​ನ್ನು ನೋಡಲು ಜೈಲಿಗೆ ಬಂದು ಕಾಯುತ್ತಿದ್ದಾರೆ.

'ದಾಸ'ನ ದರ್ಶನಕ್ಕಾಗಿ ಜೈಲಿಗೆ ಬಂದು ಕಾಯುತ್ತಿರುವ ಅಭಿಮಾನಿಗಳು
'ದಾಸ'ನ ದರ್ಶನಕ್ಕಾಗಿ ಜೈಲಿಗೆ ಬಂದು ಕಾಯುತ್ತಿರುವ ಅಭಿಮಾನಿಗಳು (ETV Bharat)

By ETV Bharat Karnataka Team

Published : Aug 28, 2024, 11:50 AM IST

'ದಾಸ'ನ ದರ್ಶನಕ್ಕಾಗಿ ಜೈಲಿಗೆ ಬಂದು ಕಾಯುತ್ತಿರುವ ಅಭಿಮಾನಿಗಳು (ETV Bharat)

ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರದಲ್ಲಿದ್ದ ಆರೋಪಿ ದರ್ಶನ್​ ಬಿಂದಾಸ್​ ಲೈಫ್​ ಫೋಟೋ ವೈರಲ್​ ಬೆನ್ನಲ್ಲೇ ಆರೋಪಿಗಳನ್ನು ಬೇರೆ ಬೇರೆ ಕಾರಾಗೃಹಗಳಿಗೆ ಸ್ಥಳಾಂತರ ಮಾಡಲು ಬೆಂಗಳೂರು ನಗರದ 24ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ. ನ್ಯಾಯಾಲಯದ ಆದೇಶದಂತೆ ಆರೋಪಿ ನಟ ದರ್ಶನ್​ ಅವರನ್ನು ಬಳ್ಳಾರಿಯ ಜೈಲ್​ಗೆ ಶಿಫ್ಟ್​ ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ದರ್ಶನ್​ ಅಭಿಮಾನಿಗಳು ಜೈಲು ಬಳಿ ಬೆಳಗ್ಗೆಯೇ ಆಗಮಿಸಿದ್ದಾರೆ.

ದರ್ಶನ್ ನೋಡಲು ಬಂದಿರುವ ಅಭಿಮಾನಿಗಳು, " ನಮಗೆ ದರ್ಶನ್​ ಮೇಲಿನ ಆರೋಪದ ಬಗ್ಗೆ ಗೊತ್ತಿಲ್ಲ. ನಾವು ನಮ್ಮ ನೆಚ್ಚಿನ ನಟನನ್ನು ನೋಡಲು ಬಂದಿದ್ದೇವೆ. ಸಾಮಾನ್ಯವಾಗಿ ನಾವು ಹಿರೋಗಳನ್ನು ನೋಡಲು ಬೆಂಗಳೂರಿಗೆ ತೆರಳುತ್ತೇವೆ. ಆದರೆ, ಇದೀಗ ದರ್ಶನ್​ ಬಳ್ಳಾರಿಗೆ ಬರುತ್ತಿದ್ದಾರೆ. ನಾವೆಲ್ಲ ದರ್ಶನ್​ನನ್ನು ನೋಡಲು ಕಾತರರಾಗಿದ್ದೇವೆ. ಅವರನ್ನು ನೋಡಿಯೇ ನಾವು ಮನೆಗೆ ಹೋಗುತ್ತೇವೆ. ನೋಡಲು ಸ್ವಲ್ಪ ಅವಕಾಶ ಸಿಕ್ಕರೇ ಸಾಕು" ಎಂದು ಅಭಿಮಾನಿಗಳು ಮನವಿ ಮಾಡುತ್ತಿದ್ದಾರೆ.

ಧಾರವಾಡಕ್ಕೆ ಆರೋಪಿ ಧನರಾಜ್ ಶಿಫ್ಟ್:ರೇಣುಕಾಸ್ವಾಮಿ ಕೊಲೆ ಪ್ರಕರಣದ A9 ಆರೋಪಿಯಾಗಿರುವ ಧನರಾಜ್​ನನ್ನು ಧಾರವಾಡದ ಕೇಂದ್ರ ಕಾರಾಗೃಹಕ್ಕೆ ಸ್ಥಳಾಂತರ ಮಾಡಲು ಬೆಂಗಳೂರು ನಗರದ 24ನೇ ಎಸಿಎಂಎಂ ನ್ಯಾಯಾಲಯದ ಆದೇಶಿಸಿದೆ. ಇಂದು ಬೆಂಗಳೂರಿನ ಪರಪ್ಪನ ಅಗ್ರಹಾರದಿಂದ ಆರೋಪಿ ಧನರಾಜ್​ ಧಾರವಾಡಕ್ಕೆ ಶಿಫ್ಟ್ ಆಗಲಿದ್ದಾನೆ.

ಈ ಹಿನ್ನೆಲೆ ಧಾರವಾಡ ಕೇಂದ್ರ ಕಾರಾಗೃಹ ಅಧಿಕಾರಿಗಳು ಅಲರ್ಟ್​ ಆಗಿದ್ದಾರೆ. ಸಿಸಿಟಿವಿ ಸೇರಿದಂತೆ ಎಲ್ಲ ಭದ್ರತೆಯನ್ನು ಜೈಲು ಅಧಿಕಾರಿಗಳು ಹೆಚ್ಚಿಸಿದ್ದಾರೆ. ಧಾರಾವಾಡದ ಜೈಲು ಒಟ್ಟು 9 ಬ್ಯಾರಕ್‌ಗಳು ಹೊಂದಿದ್ದು, ಸುಮಾರು 611 ಕೈದಿಗಳಿದ್ದಾರೆ.

ಇದನ್ನೂ ಓದಿ:ದರ್ಶನ್​ ಗ್ಯಾಂಗ್​ನ ಇಬ್ಬರು ಆರೋಪಿಗಳು ಜೈಲಿಗೆ ಶಿಫ್ಟ್ ಆಗುವ ಮೊದಲೇ ಸೆಂಟ್ರಲ್ ಜೈಲಿನ ಮೇಲೆ ಪೊಲೀಸರ ದಾಳಿ - Police raid on Central Jail

ಇದನ್ನೂ ಓದಿ:ದರ್ಶನ್, ಸಹಚರರ ನ್ಯಾಯಾಂಗ ಬಂಧನ ಇಂದು ಅಂತ್ಯ - Darshan Judicial Custody

ABOUT THE AUTHOR

...view details