ದಾವಣಗೆರೆ:ನಗರದ ಕಲ್ಯಾಣ ಮಂಟಪಗಳನ್ನು ಟಾರ್ಗೆಟ್ ಮಾಡಿ ಕಳ್ಳತನ ಮಾಡಿ ಪರಾರಿಯಾಗುತ್ತಿದ್ದ ಕಳ್ಳನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ. ದಾವಣಗೆರೆ ಶಾಂತಿನಗರದ ನಿವಾಸಿ ಮಸಾಲೆ ವ್ಯಾಪಾರಿ ಕಿರಣ್ ನಾಯ್ಕ ಆರ್ (26) ಎಂಬುವನು ಬಂಧಿತ ಆರೋಪಿ.
ಕಳ್ಳತನಕ್ಕೆ ಒಳಗಾದ ಚಿದಾನಂದ ಗೌಡ ಎಂಬುವರು ಕುಟುಂಬ ಸಮೇತ ಫೆ.11 ರಂದು ದಾವಣಗೆರೆ ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನಕ್ಕೆ ಮದುವೆಗೆ ಆಗಮಿಸಿದ್ದರು. ಫೆ.12 ರಂದು ಸಮುದಾಯ ಭವನದಲ್ಲಿ ಉಳಿದುಕೊಳ್ಳಲು ಸಹ ರೂಮ್ ಪಡೆದಿದ್ದರು. ಮದುವೆ ಮುಗಿದ ಬಳಿಕ ಬ್ಯಾಗಿನಲ್ಲಿಟ್ಟಿದ್ದ 55 ಸಾವಿರ ಬೆಲೆ ಬಾಳುವ 10 ಗ್ರಾಂ ತೂಕದ ಬಂಗಾರದ ಕಿವಿಯೋಲೆ, 75 ಸಾವಿರ ಬೆಲೆಬಾಳುವ 15 ಗ್ರಾಂ ತೂಕದ ಬಂಗಾರದ ಸರ ಕಳವು ಆಗಿತ್ತು. ನಕಲಿ ಕೀ ಬಳಿಸಿ ರೂಮ್ ತೆಗೆದು ಅಪರಿಚಿತ ವ್ಯಕ್ತಿ ಕಳ್ಳತನ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಈ ಕುರಿತು ಚಿದಾನಂದ ಗೌಡ ಎಂಬುವರು ವಿದ್ಯಾನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.