ಕರ್ನಾಟಕ

karnataka

ETV Bharat / state

ಇನ್ವೆಸ್ಟ್‌ ಕರ್ನಾಟಕ 3ನೇ ದಿನ: ವಿವಿಧ ಕಂಪೆನಿಗಳೊಂದಿಗೆ 2,220 ಕೋಟಿ ಹೂಡಿಕೆ ಒಪ್ಪಂದ - INVEST KARNATAKA 2025

ಜಾಗತಿಕ ಹೂಡಿಕೆದಾರರ ಸಮಾವೇಶದ ಮೂರನೇ ದಿನವಾದ ಗುರುವಾರ ಮಾಡಿಕೊಳ್ಳಲಾದ ಹೂಡಿಕೆ ಒಪ್ಪಂದಗಳ ವಿವರ ಈ ಕೆಳಗಿನಂತಿದೆ.

details-of-investment-deals-signed-in-invest-karnataka-2025
ಇನ್ವೆಸ್ಟ್ ಕರ್ನಾಟಕ-2025 (ETV Bharat)

By ETV Bharat Karnataka Team

Published : Feb 13, 2025, 10:56 PM IST

ಬೆಂಗಳೂರು:ಇನ್ವೆಸ್ಟ್ ಕರ್ನಾಟಕ-2025ರ ಮೂರನೇ ದಿನವಾದ ಗುರುವಾರ ವಿವಿಧ ಸಂಸ್ಥೆಗಳ ಜೊತೆ ಒಟ್ಟು 2,220 ಕೋಟಿ ರೂ. ಮೊತ್ತದ ಹೂಡಿಕೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

ರಾಜ್ಯದಲ್ಲಿ ಕ್ರೀಡಾ ಮೂಲಸೌಲಭ್ಯ ಅಭಿವೃದ್ಧಿ, ಉಕ್ಕು ಹಾಗೂ ರೇಷ್ಮೆ ಉತ್ಪನ್ನ ತಯಾರಿಕೆಯೂ ಸೇರಿದಂತೆ ಒಟ್ಟು 9 ಹೂಡಿಕೆ ಒಪ್ಪಂದಗಳಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ.

ಹೂಡಿಕೆ ಒಪ್ಪಂದದ ವಿವರ:

  • ವೋಲ್ವೊ ಕಂಪೆನಿ ಹೊಸಕೋಟೆಯಲ್ಲಿರುವ ತಯಾರಿಕಾ ಸ್ಥಾವರವನ್ನು ವಿಸ್ತರಣೆ ಸಂಬಂಧ 1,400 ಕೋಟಿ ರೂ. ಬಂಡವಾಳ ಹೂಡಿಕೆ ಒಡಂಬಡಿಕೆ.
  • ಬಿಬಿಎಂ ಸ್ಪೋರ್ಟ್ಸ್ ಫೀಲ್ಡ್ಸ್ ಆ್ಯಂಡ್‌ ಹಾಲ್ಸ್ ಕಾಂಟ್ರಾಕ್ಟಿಂಗ್ ಎಲ್ಎಲ್‌ಸಿ ₹250 ಕೋಟಿ - ಕ್ರೀಡಾ ಮೂಲಸೌಲಭ್ಯ ಅಭಿವೃದ್ಧಿ.
  • ಸ್ಟೀಲ್ ಫೋರ್ಸ್ ಬಿಲ್ಡಿಂಗ್ ಮೆಟೀರಿಯಲ್ಸ್ ಎಲ್ಎಲ್‌ಸಿ ₹250 ಕೋಟಿ. ಉಕ್ಕು ಮತ್ತು ಸಂಬಂಧಿತ ಉತ್ಪನ್ನಗಳ ತಯಾರಿಕೆ.
  • ಸೆರಿಟೆಕ್ ಫಾರ್ಮ್ ಎಲ್ಎಲ್‌ಪಿ ₹25 ಕೋಟಿ. ರಫ್ತು ಮಾಡುವ ನೂಲು ಮತ್ತು ರೇಷ್ಮೆ ಉತ್ಪನ್ನಗಳ ತಯಾರಿಕೆ.
  • ಮೊರೆಕ್ಸ್ ಗ್ರೂಪ್ ₹ 150 ಕೋಟಿ. ಕನ್ವೆನ್ಷನ್ ಸೆಂಟರ್ ಆರಂಭ.
  • ನಾಝ್‌ ಸ್ಟಾರ್ ಟ್ರೇಡಿಂಗ್ ಎಲ್ಎಲ್‌ಸಿ ₹ 5 ಕೋಟಿ. ಸಿದ್ಧಉಡುಪು, ವಸ್ತ್ರ ಮತ್ತು ಜವಳಿ ತಯಾರಿಕೆ.
  • ಡೆಲ್ವಾನ್ ಗ್ರೂಪ್ ₹ 120 ಕೋಟಿ. ಹೋಟೆಲ್ ಮತ್ತು ರೆಸಾರ್ಟ್ ಆರಂಭ.
  • ಕ್ಲಬ್ ಸುಲೈಮನಿ ಫುಡ್‌ ಆ್ಯಂಡ್‌ ಬಿವರೀಜಿಸ್‌ ಎಲ್ಎಲ್‌ಪಿ ₹ 5 ಕೋಟಿ. ಕೆಫೆ, ಎಕ್ಸ್‌ಪ್ರೆಸ್ ಮತ್ತು ಪೂರ್ಣ ಸೇವಾ ರೆಸ್ಟೋರೆಂಟ್ ಆರಂಭ.
  • ಯುಸ್ರಾ ಹೋಲ್ಡಿಂಗ್ ಪ್ರೈವೇಟ್ ಲಿಮಿಟೆಡ್ ₹ 15 ಕೋಟಿ. ಮೈಸೂರಿನಲ್ಲಿ ಯೋಗಕ್ಷೇಮ ಕೇಂದ್ರ ಸ್ಥಾಪನೆ.

ಇದನ್ನೂ ಓದಿ:'ಭವಿಷ್ಯದಲ್ಲಿ AI ಮೂಲಕ ಸಾವಿನ ನಂತರವೂ ಮೊಮ್ಮಕ್ಕಳೊಡನೆ ಮಾತಾಡಬಹುದು'

ABOUT THE AUTHOR

...view details