ಧಾರವಾಡ:ಅಪಘಾತದಲ್ಲಿ ಸಾವಿಗೀಡಾಗಿದ್ದ ಪಾಲಿಸಿದಾರನ ಕುಟುಂಬಕ್ಕೆ ವಿಮಾ ಹಣ 15 ರೂ ಲಕ್ಷ ಬಡ್ಡಿ ಸಮೇತ ನೀಡುವಂತೆ ಲೋಂಬಾರ್ಡ್ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗವು ಆದೇಶಿಸಿದೆ.
ಧಾರವಾಡ ಸರಸ್ವತಪುರದ ನಿವಾಸಿಗಳಾದ ಪ್ರೀತಿ ಮತ್ತು ಅವರ ಮಗಳಾದ ಪೂರ್ವಿ ಅವರು ತಮ್ಮ ತಂದೆ ಪ್ರಶಾಂತ ಶಾನಬಾಗ್ ಅವರು ಆಯ್.ಸಿ.ಆಯ್.ಸಿ.ಆಯ್ ಲೋಂಬಾರ್ಡ ಅವರಲ್ಲಿ ರೂ.1489 ಪ್ರೀಮಿಯಮ್ ಮತ್ತು ಅದರ ಜೊತೆ ಪಿಎ ಕವರೇಜ್ ಮಾಲೀಕ ಮತ್ತು ಡ್ರೈವರ್ಗೆ ಹೆಚ್ಚಿನ ಮೊತ್ತ ರೂ.375 ಪಾವತಿಸಿ ವಿಮೆಯನ್ನು ಮಾಡಿಸಿದ್ದರು.
2022 ರಲ್ಲಿ ಪ್ರಶಾಂತ ಶಾನಬಾಗ ರಸ್ತೆಯ ಅಪಘಾತದಲ್ಲಿ ಮರಣ ಹೊಂದಿದರು. ದೂರುದಾರರು ತಮ್ಮ ಗಂಡ/ತಂದೆಯ ವಿಮಾ ಹಣವನ್ನು ಕೊಡುವಂತೆ ಕಂಪನಿಗೆ ದಾಖಲೆಗಳೊಂದಿಗೆ ಬೇಡಿಕೆಯನ್ನು ಇಟ್ಟಿದ್ದರು. ಕಂಪನಿಯು ಇವರ ಕ್ಲೇಮ್ನ್ನು ನಿರಾಕರಿಸಿ ಪ್ರಶಾಂತ ಶಾನಬಾಗ ಇವರು ಅಪಘಾತದ ಸಮಯದಲ್ಲಿ ಲೈಸನ್ಸ್ ಹೊಂದಿಲ್ಲ. ಆದ ಕಾರಣ ದೂರುದಾರರು ವಿಮಾ ಹಣವನ್ನು ಪಡೆಯಲು ಅರ್ಹರಲ್ಲವೆಂದು ಅವರ ಬೇಡಿಕೆಯನ್ನು ನಿರಾಕರಿಸಿದ್ದರು.
ವಿಮಾ ಕಂಪನಿಗೆ ಹಲವು ಬಾರಿ ವಿಮೆ ಹಣವನ್ನು ಪಾವತಿಸಲು ಕೇಳಿಕೊಂಡರು ಎದುರುದಾರರು ತಮಗೆ ವಿಮಾ ಹಣ ಅಥವಾ ಪರಿಹಾರ ಕೊಟ್ಟಿಲ್ಲ ಅಂತಹ ವಿಮಾ ಕಂಪನಿಯವರ ನಡವಳಿಕೆ ಗ್ರಾಹಕರ ರಕ್ಷಣಾ ಕಾಯ್ದೆ ಅಡಿ ಸೇವಾ ನ್ಯೂನ್ಯತೆ ಆಗುತ್ತದೆ ಅಂತಾ ಹೇಳಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ದೂರುದಾರರು 2023 ರಲ್ಲಿ ಧಾರವಾಡ ಜಿಲ್ಲಾ ಗ್ರಾಹಕರ ಆಯೋಗಕ್ಕೆ ದೂರು ಸಲ್ಲಿಸಿದ್ದರು.