ಹುಬ್ಬಳ್ಳಿ:ಮೇ 15 ರಂದು ಹುಬ್ಬಳ್ಳಿ ವೀರಾಪುರ ಓಣಿಯಲ್ಲಿ ಅಂಜಲಿ ನಿವಾಸಕ್ಕೆ ನುಗ್ಗಿ ಹತ್ಯೆ ಮಾಡಿದ್ದ ಗಿರೀಶನನ್ನು ನಗರದ ಪ್ರವಾಸಿ ಮಂದಿರಲ್ಲಿ ಇಡೀ ದಿನ ಸಿಐಡಿ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಿದರು.
ದಾವಣಗೆರೆ ಬಳಿ ರೈಲ್ವೆಯಲ್ಲಿ ಅಂಜಲಿ ಹಂತಕನಿಂದ ಚಾಕು ಇರಿತಕ್ಕೊಳ್ಳಗಾದ ಮಹಿಳೆ ಹಾಗೂ ಆರೋಪಿಯನ್ನು ಮುಖಾಮುಖಿ ವಿಚಾರಣೆ ಮಾಡುವುದರೊಂದಿಗೆ ಸಿಐಡಿ ಅಧಿಕಾರಿಗಳು ಮಾಹಿತಿ ಕಲೆ ಹಾಕಿದರು. ಚಾಕು ಇರಿತಕ್ಕೆ ಒಳಗಾದ ಲಕ್ಷ್ಮೀಯನ್ನು ಪ್ರವಾಸಿ ಮಂದಿರಕ್ಕೆ(ಐಬಿ) ಕರೆಸಿಕೊಂಡ ಸಿಐಡಿ ಅಧಿಕಾರಿಗಳು, ಹಂತಕನ ಮುಂದೆ ಘಟನೆ ಬಗ್ಗೆ ವಿವರಣೆ ಪಡೆದರು. ರೈಲಿನಲ್ಲಿ ಚಾಕುವಿನಿಂದ ದಾಳಿ ಮಾಡಿದ್ದ ಆರೋಪಿ ಇವನೇನಾ ಎಂದು ಕೇಳಿದಾಗ, ಅದಕ್ಕೆ ಹೌದು ಎಂದು ಮಹಿಳೆ ಉತ್ತರಿಸಿದರು.
ಸಿಐಡಿ ವಿಚಾರಣೆ ಬಳಿಕ ಲಕ್ಷ್ಮಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿ, ನನ್ನ ಮಗನ ಹಾಸ್ಟೆಲ್ ಅಡ್ಮಿಶನ್ಗೆ ತುಮಕೂರಿಗೆ ಹೋಗಿದ್ದೆವು. ವಾಪಸ್ ರೈಲಿನಲ್ಲಿ ಬರುವಾಗ ದಾವಣಗೆರೆ ಬಳಿ ಈತ ನನಗೆ ಚಾಕುವಿನಿಂದ ಇರಿದಿದ್ದ. ಇಂದು ನಮ್ಮನ್ನು ಸಿಐಡಿ ಅಧಿಕಾರಿಗಳು ವಿಚಾರಣೆಗೆ ಕರೆದಿದ್ದರು. ಈ ವೇಳೆ ಆರೋಪಿ ಮುಂದೆ ನಿಲ್ಲಿಸಿ ಕೆಲವು ಪ್ರಶ್ನೆ ಕೇಳಿದರು. ರೈಲಿನಲ್ಲಿ ಚಾಕುವಿನಿಂದ ಅಟ್ಯಾಕ್ ಮಾಡಿದ್ದ ಆರೋಪಿ ಇವನೇನಾ ಎಂದರು. ಅದಕ್ಕೆ ನಾನು ಹೌದು ಎಂದು ಹೇಳಿದೆ ಎಂದರು.