ಕರ್ನಾಟಕ

karnataka

ETV Bharat / state

ಪೆನ್​ಡ್ರೈವ್​ ಪ್ರಕರಣ ಎಸ್​ಐಟಿಗೆ ವಹಿಸಿರುವುದು ಮುಚ್ಚಿಹಾಕಲು ಅಲ್ಲ: ಚಲುವರಾಯಸ್ವಾಮಿ - Chaluvarayaswamy - CHALUVARAYASWAMY

ಹಾಸನ ಪೆನ್​ಡ್ರೈವ್​ ಪ್ರಕರಣ ಮುಚ್ಚಿ ಹಾಕುವಂತಹದ್ದಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ಪೆನ್​ಡ್ರೈವ್​ ಪ್ರಕರಣ ಎಸ್​ಐಟಿಗೆ ವಹಿಸಿರುವುದು ಮುಚ್ಚಿಹಾಕಲು ಅಲ್ಲ: ಚಲುವರಾಯಸ್ವಾಮಿ (ETV Bharat)
ಪೆನ್​ಡ್ರೈವ್​ ಪ್ರಕರಣ ಎಸ್​ಐಟಿಗೆ ವಹಿಸಿರುವುದು ಮುಚ್ಚಿಹಾಕಲು ಅಲ್ಲ: ಚಲುವರಾಯಸ್ವಾಮಿ (ETV Bharat) (Etv Bharat)

By ETV Bharat Karnataka Team

Published : May 4, 2024, 9:37 AM IST

ಶಿವಮೊಗ್ಗ: ಹಾಸನ ಪೆನ್​ಡ್ರೈವ್​ ಪ್ರಕರಣ ಮುಚ್ಚಿ ಹಾಕುವಂತಹದ್ದಲ್ಲ, ಈ ಪ್ರಕರಣವನ್ನು ಎಸ್​ಐಟಿಗೆ ವಹಿಸಿರುವುದು ಮುಚ್ಚಿ ಹಾಕಲು ಅಲ್ಲ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಈ ರೀತಿಯ ಪ್ರಕರಣ ಪ್ರಪಂಚದೆಲ್ಲೇ ಎಲ್ಲೂ ನಡೆದಿಲ್ಲ. ಇಲ್ಲಿ ಅಧಿಕಾರದ ದುರುಪಯೋಗ ಮಾಡಲಾಗಿದೆ. ಅವರು ಸಂಸದರಾಗಿದ್ದವರು ಅವರ ತಂದೆ ಮಂತ್ರಿಗಳಾಗಿದ್ದವರು, ಅವರ ಚಿಕ್ಕಪ್ಪ ಸಿಎಂ ಆಗಿದ್ದವರು, ಅವರು ಅಜ್ಜ ಪ್ರಧಾನಿಯಾಗಿದ್ದವರು ಇದರ ಲಾಭ ಪಡೆದು ನಡೆದಿರುವ ಪ್ರಕರಣ. ಇಂತಹ ದೊಡ್ಡ ಹಗರಣವನ್ನು ಮುಚ್ಚಿ ಹಾಕಿದರೆ ಜನ ಬಿಡುತ್ತಾರೆಯೇ ಎಂದು ಪ್ರಶ್ನಿಸಿದರು.

ತನಿಖೆಯ ಬಗ್ಗೆ ಗೃಹ ಸಚಿವರು ಮತ್ತು ಸಿಎಂ ಗಮನಿಸುತ್ತಿದ್ದಾರೆ. ಹಾಗಾಗಿ ಇದನ್ನು ಮುಚ್ಚಿ ಹಾಕಲು ಯಾರಿಂದಲೂ ಸಾಧ್ಯವಿಲ್ಲ ಎಂದರು. ಕುಮಾರಸ್ವಾಮಿ ಅವರು ಎಸ್​ಐಟಿ ತನಿಖೆಗೆ ಆದೇಶ ಕೊಟ್ಟಾಗ ಮೊದಲು ತನಿಖೆ ನಡೆದು ಸತ್ಯ ಹೊರ ಬರಲಿ ಎಂದವರು ಅದಕ್ಕೆ ಬದ್ಧವಾಗಿರಬೇಕು. ಅವರು ಡಿ.ಕೆ.ಶಿವಕುಮಾರ್ ಬಗ್ಗೆ ಮಾತನಾಡುವುದು, ಬೆದರಿಸುವುದು , ಹೆದರಿಸುವುದು, ನನ್ನನ್ನು ಕೆಣಕಿದರೆ ಎಲ್ಲಾ ಬಿಚ್ಚಿಡುತ್ತೇನೆ ಎನ್ನುವುದು, ಇವರೇನು ನಾಗರಹಾವಾ ಅಥವಾ ಹೆಬ್ಬಾವಾ ಎಂದು ಪ್ರಶ್ನಿಸಿದರು.

ಇದಕ್ಕೆ ಡಿ.ಕೆ.ಶಿವಕುಮಾರ್ ವೆಲ್​ಕಮ್ ಅಂದಿದ್ದಾರೆ. ಇಲ್ಲಿ ಬೇಡ, ಇದರ ಬಗ್ಗೆ ಸದನದಲ್ಲಿ ಚರ್ಚೆ ಮಾಡೋಣ ಅಂತ ಹೇಳುತ್ತಿದ್ದಾರೆ. ಕುಮಾರಸ್ವಾಮಿ ಅವರು ಮೊದಲು ತಮ್ಮ ಬಳಿ ಪೆನ್​ಡ್ರೈವ್ ಇದೆ ಎನ್ನುತ್ತಿದ್ದರು. ಕುಮಾರಸ್ವಾಮಿ ಅವರು ಮೊದಲು ನನ್ನ ಸ್ನೇಹಿತರಾಗಿದ್ದವರು. ನಾನು ಅವರಿಂದ ಇದನ್ನು ನಿರೀಕ್ಷಿಸಿರಲಿಲ್ಲ. ಇವೆಲ್ಲವೂ ಅವರ ಮೇಲೆಯೇ ಪರಿಣಾಮ ಬೀರುತ್ತದೆ. ಕುಮಾರಸ್ವಾಮಿ ಅವರು ಯೋಚನೆ ಮಾಡಬೇಕು. ಈ ಮುಂಚೆ ಎಸ್​ಐಟಿಯನ್ನು ಸ್ವಾಗತ ಮಾಡಿ ತನಿಖೆಗೆ ನಾನೂ ಸಹಕಾರ ಮಾಡುತ್ತೇನೆ ಎಂದವರು ನಂತರ ಉಲ್ಟಾ ಮಾತನಾಡುತ್ತಿದ್ದಾರೆ.

ಈ ಪೆನ್​ಡ್ರೈವ್ ಹಾಸನದಲ್ಲಿಯೇ ಹೊರಗೆ ಬಂದಿದೆ. ನಂತರ ಇದು ಎಲ್ಲ ಕಡೆ ವೈರಲ್ ಅಗಿದೆ. ಈ ಪ್ರಕರಣಕ್ಕೂ ಕಾಂಗ್ರೆಸ್​ಗೂ ಸಂಬಂಧವಿಲ್ಲ. ಕಾಂಗ್ರೆಸ್ ಈಗ ಅಧಿಕಾರದ ಸ್ಥಾನದಲ್ಲಿದೆ. ಮಹಿಳೆಯರಿಗೆ ನ್ಯಾಯ ಮತ್ತು ಸಾರ್ವಜನಿಕರಿಗೆ ಉತ್ತರ ಕೊಡಬೇಕಾಗುವುದು ನಮ್ಮ ಜವಾಬ್ದಾರಿ. ಮಂಡ್ಯದಲ್ಲಿ ಕಾಂಗ್ರೆಸ್ ಗೆಲ್ಲುತ್ತದೆ. ಅಲ್ಲಿ ನಾವು 2 ಲಕ್ಷ ಮತಗಳ ಅಂತರದಿಂದ ಗೆಲ್ಲುತ್ತೇವೆ ಎಂದು ಇದೇ ವೇಳೆ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:'ಲೇ ತಮ್ಮಾ ತಂಗಡಗಿ ನನಗೆ ನೀನ್ಯಾವ ಲೆಕ್ಕ?': ಕಾರಟಗಿಯಲ್ಲಿ ಗಾಲಿ ಜನಾರ್ದನ ರೆಡ್ಡಿ ವಾಗ್ದಾಳಿ - Janardhana Reddy

ABOUT THE AUTHOR

...view details