ಕರ್ನಾಟಕ

karnataka

ETV Bharat / state

ಶಿವಮೊಗ್ಗ: ಖಾಸಗಿ ಬಸ್ - ಕಾರು ನಡುವೆ ಡಿಕ್ಕಿ, ಪಲ್ಟಿಯಾದ ಬಸ್​ನಡಿ ಸಿಲುಕಿ ಕಾರು ಚಾಲಕ ಸಾವು - man dies in road accident - MAN DIES IN ROAD ACCIDENT

ಖಾಸಗಿ ಬಸ್‌ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಶಿರಾಳಕೊಪ್ಪದ ದೇವಿಕೊಪ್ಪ ಬಳಿ ಘಟನೆ ಸಂಭವಿಸಿದೆ. ಬಸ್‌ನಲ್ಲಿದ್ದ ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಖಾಸಗಿ ಬಸ್-ಕಾರು ನಡುವೆ ಡಿಕ್ಕಿ
ಖಾಸಗಿ ಬಸ್-ಕಾರು ನಡುವೆ ಡಿಕ್ಕಿ (ETV Bharat)

By ETV Bharat Karnataka Team

Published : Jul 3, 2024, 5:29 PM IST

Updated : Jul 3, 2024, 6:13 PM IST

ಶಿವಮೊಗ್ಗ: ಖಾಸಗಿ ಬಸ್ ಹಾಗೂ ಕಾರಿನ ನಡುವೆ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಶಿರಾಳಕೊಪ್ಪ ತಾಲೂಕಿನ ದೇವಿಕೊಪ್ಪ ಬಳಿ ನಡೆದಿದೆ. ಶಿವಮೊಗ್ಗ ನಿವಾಸಿ ಬಸವ ಪ್ರಸಾದ್(30) ಮೃತರು.

ಆನವಟ್ಟಿಯಿಂದ ಶಿವಮೊಗ್ಗ ಕಡೆಗೆ ತೆರಳುತ್ತಿದ್ದ ಬಸ್ ಕಾರಿಗೆ ಡಿಕ್ಕಿ ಹೊಡೆದಿದೆ. ನಂತರ ಬಸ್ ಪಲ್ಟಿಯಾಗಿ ಕಾರಿನ ಮೇಲೆ ಬಿದ್ದಿದೆ. ಇದರಿಂದ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬಸ್ ಪಲ್ಟಿಯಾದ ಪರಿಣಾಮ 13 ಜನ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಶಿರಾಳಕೊಪ್ಪ ಹಾಗೂ ಶಿಕಾರಿಪುರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಶಿರಾಳಕೊಪ್ಪ‌ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಪ್ರಾರಂಭಿಸಿದ್ದಾರೆ.

ಇದನ್ನೂ ಓದಿ:ದೊಡ್ಡಬಳ್ಳಾಪುರ: ಯೂಟರ್ನ್​ನಲ್ಲಿ ಮೊಪೆಡ್​ಗೆ ಕಾರು ಡಿಕ್ಕಿ, ಭಯಾನಕ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ - car collided with a moped

Last Updated : Jul 3, 2024, 6:13 PM IST

ABOUT THE AUTHOR

...view details