ಕರ್ನಾಟಕ

karnataka

ETV Bharat / state

ಸದನದೊಳಗೆ ಕಾಂಗ್ರೆಸ್ ಬಾಯ್ಮುಚ್ಚುವ ರೀತಿಯಲ್ಲಿ ಹೋರಾಡಿದ್ದೇವೆ, ಹೊರಗಡೆಯೂ ಒಗ್ಗೂಡಿ ಫೈಟ್​ ಮಾಡಬೇಕಿದೆ: ಅಶೋಕ್ - BJP JDS padayatra - BJP JDS PADAYATRA

''ಸದನದೊಳಗೆ ಕಾಂಗ್ರೆಸ್ ಬಾಯಿ ಮುಚ್ಚುವ ರೀತಿಯಲ್ಲಿ ಹೋರಾಟ ನಡೆದಿದೆ. ಹೊರಗಡೆ ಇಬ್ಬರೂ ಒಟ್ಟಿಗೆ ಹೋರಾಟ ಮಾಡಬೇಕಿದೆ. ಈ ಕುರಿತು ಹೆಚ್.ಡಿ. ಕುಮಾರಸ್ವಾಮಿಯವರ ಜೊತೆಗೆ ಮಾತನಾಡುತ್ತೇನೆ'' ಎಂದು ವಿಪಕ್ಷ ನಾಯಕ ಆರ್. ಅಶೋಕ್ ತಿಳಿಸಿದರು.

R Ashok  Dakshina Kannada  BJP JDS padayatra  ಆರ್ ಅಶೋಕ್
ಆರ್ ಅಶೋಕ್ (ETV Bharat)

By ETV Bharat Karnataka Team

Published : Jul 31, 2024, 7:09 PM IST

ಸದನದೊಳಗೆ ಕಾಂಗ್ರೆಸ್ ಬಾಯ್ಮುಚ್ಚುವ ರೀತಿಯಲ್ಲಿ ಹೋರಾಡಿದ್ದೇವೆ, ಹೊರಗಡೆಯೂ BJP-JDS ಒಗ್ಗೂಡಿ ಫೈಟ್​ ಮಾಡಬೇಕಿದೆ: ಅಶೋಕ್ (ETV Bharat)

ಬಂಟ್ವಾಳ:''ವಾಲ್ಮೀಕಿ ನಿಗಮದ ಅಕ್ರಮ, ಮುಡಾ ಹಗರಣ ವಿರೋಧಿಸಿ ಸದನದೊಳಗೆ ಕಾಂಗ್ರೆಸ್ ಬಾಯ್​​​​​​​​​ ಮುಚ್ಚುವ ರೀತಿಯಲ್ಲಿ ಹೋರಾಟ ಮಾಡಿದ್ದೇವೆ. ಅದೇ ರೀತಿ ಸದನದ ಹೊರಗಡೆಯೂ ಹೋರಾಟ ಯಶಸ್ವಿಯಾಗಬೇಕಾದರೆ, ಎನ್​ಡಿಎ ಭಾಗವಾಗಿರುವ ಬಿಜೆಪಿ- ಜೆಡಿಎಸ್​ ಒಗ್ಗಟ್ಟಾಗಬೇಕಿದೆ. ಈ ಕುರಿತು ಹೆಚ್.ಡಿ. ಕುಮಾರಸ್ವಾಮಿಯವರ ಜೊತೆಗೆ ಮಾತನಾಡುತ್ತೇನೆ'' ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.

ಬಂಟ್ವಾಳದಲ್ಲಿ ಇಂದು (ಬುಧವಾರ) ನೆರೆಪೀಡಿತ ಪ್ರದೇಶಗಳನ್ನು ವೀಕ್ಷಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ವಾಲ್ಮೀಕಿ ನಿಗಮದ ಅಕ್ರಮ, ಮುಡಾ ಹಗರಣ ವಿರೋಧಿಸಿ ಆಯೋಜಿಸಿರುವ ಬಿಜೆಪಿ- ಜೆಡಿಎಸ್​ ಪಾದಯಾತ್ರೆಯ ಹೋರಾಟ ಸಫಲವಾಗಬೇಕಾದರೆ, ಬಿಜೆಪಿ- ಜೆಡಿಎಸ್​ ಒಟ್ಟಾಗಿ ಮುನ್ನಡಬೇಕಾಗುತ್ತದೆ. ಈ ವಿಚಾರ ಕುರಿತಾಗಿ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಮಾತನಾಡುವೆ. ನಮ್ಮ ಉದ್ದೇಶ ಹಗರಣವನ್ನು ಜನರ ಮುಂದಿಡುವುದು'' ಎಂದರು.

''ಜೆಡಿಎಸ್ ಅಭಿಪ್ರಾಯ ಪರಾಮರ್ಶಿಸಿ ನಿರ್ಧಾರ ಕೈಗೊಳ್ಳಲಾಗುವುದು. ನಮ್ಮ ಉದ್ದೇಶ ವಾಲ್ಮೀಕಿ ನಿಗಮದ ಅಕ್ರಮ, ಮುಡಾ ಹಗರಣವನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತೇವೆ. 4 ಸಾವಿರ ಕೋಟಿ ರೂ. ಮೊತ್ತದ ಮುಡಾ ಹಗರಣ ನಡೆದಿದೆ. 86 ಸಾವಿರ ಮಂದಿ ಅರ್ಜಿ ಹಾಕಿ ಸೈಟ್​ಗಾಗಿ ಕಾಯುತ್ತಿದ್ದಾರೆ. ರಾಜ್ಯ ಕಾಪಾಡುವವರು, ಸಂವಿಧಾನ ರಕ್ಷಣೆ ಎತ್ತಿ ಹಿಡಿಯಬೇಕಾದವರೇ ಆ ಸೈಟ್​ಗಳನ್ನು ಕಬಳಿಸಿದರೆ, ರಾಜ್ಯದ ಜನರ ಪಾಡೇನು?'' ಎಂದು ಆರ್. ಅಶೋಕ್ ಕಿಡಿಕಾರಿದರು.

''ನಾವು ಅನ್ಯಾಯ ಮಾಡುವುದಿಲ್ಲ ಎಂದವರು ಭೂಕಬಳಿಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅಶೋಕ್ , ''ಸದನದೊಳಗೆ ಕಾಂಗ್ರೆಸ್ ಬಾಯ್ಮುಚ್ಚುವ ರೀತಿಯಲ್ಲಿ ಬಿಜೆಪಿ- ಜೆಡಿಎಸ್ ಜೊತೆಗೂಡಿ ಹೋರಾಟ ಮಾಡಿದ್ದೇವೆ. ಸದನದ ಹೊರಗೆಯೂ ಅದೇ ರೀತಿ ಹೋರಾಟ ಆಗಬೇಕು ಎಂದು ನನ್ನ ಬಯಕೆ. ಹೋರಾಟ ಸಫಲವಾಗಬೇಕಿದ್ದರೆ ಇಬ್ಬರೂ ಒಟ್ಟಿಗೆ ಹೋರಾಟ ಮಾಡಬೇಕಾಗಿದೆ. ಜೆಡಿಎಸ್ ಅಸಮಾಧಾನವನ್ನು ಶಮನ ಮಾಡುತ್ತೇವೆ'' ಎಂದು ಹೇಳಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಇದೇ ಸಂದರ್ಭದಲ್ಲಿ ಇದ್ದರು.

ಇದನ್ನೂ ಓದಿ:ಮತ್ತೆ ಪಾದಯಾತ್ರೆ ರಾಜಕೀಯದ ಸದ್ದು: ಪ್ರಮುಖ ಪಾದಯಾತ್ರೆಗಳ ಹಿಂದಿರುವ ರಾಜಕೀಯ ಲಾಭ - ನಷ್ಟದ ಲೆಕ್ಕಾಚಾರವೇನು? - BJP JDS padayatra

ABOUT THE AUTHOR

...view details