ಕರ್ನಾಟಕ

karnataka

ETV Bharat / state

ಬೆಂಗಳೂರು: ಮಾಲೀಕನ ಪ್ರಜ್ಞೆ ತಪ್ಪಿಸಿ ಮನೆ ದೋಚಿದ್ದ ನೇಪಾಳದ ದಂಪತಿ ಬಂಧನ - NEPAL COUPLE ARRESTED

ನಾಗೇಶ್​ ಅವರು ಮನೆಯಲ್ಲಿ ಒಂಟಿಯಾಗಿದ್ದಾಗ ಕೆಲಸಕ್ಕಿದ್ದ ನೇಪಾಳ ಮೂಲದ ದಂಪತಿ ಅವರ ಪ್ರಜ್ಞೆ ತಪ್ಪಿಸಿ, ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದರು.

Sampige theater owner Nagesh's home
ಸಂಪಿಗೆ ಥಿಯೇಟರ್ ಮಾಲೀಕ ನಾಗೇಶ್ ಅವರ ಮನೆ (ETV Bharat)

By ETV Bharat Karnataka Team

Published : Nov 8, 2024, 1:25 PM IST

ಬೆಂಗಳೂರು: ಮಾಲೀಕನ ಪ್ರಜ್ಞೆ ತಪ್ಪಿಸಿ ಮನೆ ದೋಚಿದ್ದ ನೇಪಾಳದ ದಂಪತಿಯನ್ನು ಜಯನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸಂಪಿಗೆ ಥಿಯೇಟರ್ ಮಾಲೀಕ ನಾಗೇಶ್ ಅವರ ಜಯನಗರ 3ನೇ ಬ್ಲಾಕ್‌ನಲ್ಲಿರುವ ಮನೆಯಲ್ಲಿ ಅಕ್ಟೋಬರ್ 21ರಂದು ಕಳ್ಳತನ ನಡೆದಿತ್ತು. ಮನೆಯಲ್ಲಿದ್ದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿದ್ದ ಆರೋಪಿಗಳ ವಿರುದ್ಧ ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನಾಗೇಶ್ ಅವರ ಮನೆಯಲ್ಲಿ 2 ವರ್ಷಗಳಿಂದ ನೇಪಾಳ ಮೂಲದ ಗಣೇಶ್ ಹಾಗೂ ಗೀತಾ ದಂಪತಿ ಕೆಲಸ ಮಾಡುತ್ತಿದ್ದರು. ಅ.20ರಂದು ಸಂಬಂಧಿಕರ ಮನೆಯಲ್ಲಿ ಕಾರ್ಯಕ್ರಮವಿದ್ದ ಕಾರಣ ನಾಗೇಶ್ ಅವರನ್ನು ಹೊರತುಪಡಿಸಿ ಮನೆಯವರೆಲ್ಲರೂ ತೆರಳಿದ್ದರು. ನಾಗೇಶ್ ಒಂಟಿಯಾಗಿದ್ದ ಸಮಯದಲ್ಲಿ ಅವರ ಪ್ರಜ್ಞೆ ತಪ್ಪಿಸಿದ್ದ ಆರೋಪಿ ದಂಪತಿ ಮನೆಯಲ್ಲಿದ್ದ 1 ಕೆ.ಜಿ ಚಿನ್ನಾಭರಣ, 2 ಲಕ್ಷ ರೂಪಾಯಿ ನಗದು ಕದ್ದು ಪರಾರಿಯಾಗಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು, ಸಿಸಿಟಿವಿ ದೃಶ್ಯಗಳು ಹಾಗೂ ಮೊಬೈಲ್ ನೆಟ್‌ವರ್ಕ್ ಆಧರಿಸಿ ಮುಂಬೈನಲ್ಲಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಹೆಚ್ಚಿನ ವಿಚಾರಣೆ ಕೈಗೊಳ್ಳಲಾಗಿದೆ ಎಂದು ಜಯನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಹೈಫೈ ಮನೆಗಳೇ ಇವರ ಟಾರ್ಗೆಟ್: ರಾತ್ರಿ ವೇಳೆ ಕನ್ನ ಹಾಕುತ್ತಿದ್ದ ದಂಪತಿ ಸೇರಿ ಐವರು ಅರೆಸ್ಟ್

ABOUT THE AUTHOR

...view details