ಕರ್ನಾಟಕ

karnataka

ETV Bharat / state

ನಡುರಸ್ತೆಯಲ್ಲಿ ಆಟೋ ವ್ಹೀಲಿಂಗ್: ನೆಲಮಂಗಲದಲ್ಲಿ ಚಾಲಕನ ಬಂಧನ - AUTO DRIVER ARREST

ರಸ್ತೆಯಲ್ಲಿ ವ್ಹೀಲಿಂಗ್ ಮಾಡುತ್ತಿದ್ದ ಆಟೋ ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.

auto wheeling
ಆಟೋ ವ್ಹೀಲಿಂಗ್ (Viral Video)

By ETV Bharat Karnataka Team

Published : Oct 21, 2024, 10:34 AM IST

ನೆಲಮಂಗಲ (ಬೆಂಗಳೂರು ಗ್ರಾಮಾಂತರ):ರಾತ್ರಿ ವೇಳೆ ಜನನಿಬಿಡ ರಸ್ತೆಯಲ್ಲಿ ಆಟೋ ವ್ಹೀಲಿಂಗ್ ಮಾಡುತ್ತಿದ್ದ ಚಾಲಕನನ್ನು ನೆಲಮಂಗಲ ಪೊಲೀಸರು ಬಂಧಿಸಿ, ಪ್ರಕರಣ ದಾಖಲಿಸಿದ್ದಾರೆ.

ಆಕಾಶ್ (27) ಎಂಬಾತನೇ ಬಂಧಿತ ಆಟೋ ಚಾಲಕನಾಗಿದ್ದಾನೆ. ನಡುರಸ್ತೆಯಲ್ಲಿ ವ್ಹೀಲಿಂಗ್ ಮಾಡಿದ್ದ ಬಗ್ಗೆ ಪೊಲೀಸರ ಗಮನಕ್ಕೆ ಬಂದಿತ್ತು. ಅಲ್ಲದೇ, ರಾತ್ರಿ ವೇಳೆ ವ್ಹೀಲಿಂಗ್ ಮಾಡುತ್ತಿದ್ದ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿತ್ತು.

ರಾಷ್ಟ್ರೀಯ ಹೆದ್ದಾರಿ 75ರ ನೆಲಮಂಗಲ - ಕುಣಿಗಲ್ ರಸ್ತೆಯ ಮಲ್ಲರಬಾಣವಾಡಿ ಬಳಿ ಆಟೋದಲ್ಲಿ ವ್ಹೀಲಿಂಗ್ ಮಾಡಿದ ವಿಚಾರ ಆಕ್ಟೋಬರ್ 19ರಂದು ಪೊಲೀಸರ ಗಮನಕ್ಕೆ ಬಂದಿತ್ತು. ಬಳಿಕ ಸ್ಥಳಕ್ಕೆ ಹೋಗಿ ಆಟೋ ಚಾಲಕನನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ನೆಲಮಂಗಲ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ:ಹುಬ್ಬಳ್ಳಿ: ಬಾಡಿಗೆದಾರರ ಮನೆಯಲ್ಲೇ ಚಿನ್ನಾಭರಣ, ನಗದು ದೋಚಿದ ಆರೋಪಿ ಬಂಧನ

ABOUT THE AUTHOR

...view details