ಬೆಂಗಳೂರು : ಮರಳುಗಾಡು, ಗುಡ್ಡಗಾಡು, ಎರಡು ಅಡಿ ಗುಂಡಿ ಇದ್ದರೂ ಈ ವಾಹನ ಓಡುತ್ತದೆ. ಇದೇ ಮೊದಲ ಬಾರಿಗೆ ಸಂಪೂರ್ಣವಾಗಿ ಭಾರತದಲ್ಲೇ 'ಅಶ್ವ-4*4' ನಾಲ್ಕು ಚಕ್ರದ ವಾಹನ ತಯಾರಾಗಿದೆ. ಅರಮನೆ ಆವರಣದಲ್ಲಿ ಫಸ್ಟ್ ಸರ್ಕಲ್ ಸೊಸೈಟಿ ಆಯೋಜಿಸಿದ್ದ ಉದ್ಯಮಿ ಒಕ್ಕಲಿಗ ಮೇಳದಲ್ಲಿ ರೈತರು ಸೇರಿದಂತೆ ನೂರಾರು ಮಂದಿಯ ಗಮನವನ್ನು ಅಶ್ವ 4*4 ವಾಹನ ಸೆಳೆದಿದೆ.
ಬೆಂಗಳೂರು ಮೂಲಕ ಎ - ಥಾನ್ ಆಲ್ಟೆರೈನ್ ಪ್ರೈವೇಟ್ ಲಿಮಿಟೆಡ್ (A- Thon Allterrain Pvt Ltd) ಅಶ್ವ 4*4 ವಾಹನವನ್ನು ಅನಾವರಣಗೊಳಿಸಿದೆ. ಕೃಷಿ ಅಗತ್ಯಗಳನ್ನು ಪೂರೈಸಲು ಹಾಗೂ ಉಪಯುಕ್ತವಾಗಿ ಈ ವಾಹನವನ್ನು ಬಳಸಬಹುದಾಗಿದೆ. ಈ ವಾಹನಕ್ಕೆ ಆರ್ಟಿಒದಿಂದ ರಿಜಿಸ್ಟ್ರೇಷನ್ ಆಗಿಲ್ಲ. ಹಾಗಾಗಿ, ಈ ವಾಹನ ಮುಖ್ಯ ರಸ್ತೆಯಲ್ಲಿ ಓಡಾಡಲು ಅನುಮತಿ ಇಲ್ಲ. ಎಸ್ಟೇಟ್, ರೆಸಾರ್ಟ್, ಫಾರಂ ಹೌಸ್ ಸೇರಿದಂತೆ ತೋಟಗಳಲ್ಲಿ ಓಡಿಸಬಹುದು.
ಥಾನ್ ಆಲ್ಟೆರೈನ್ ಪ್ರೈವೆಟ್ ಲಿಮಿಟೆಡ್ನ ನಿರ್ದೇಶಕ ಸಂದೀಪ್ ಮಾತನಾಡಿದರು (ETV Bharat) ಈ ವಾಹನದ ಸಂಪೂರ್ಣ ಮಾಹಿತಿ ಇಲ್ಲಿದೆ : ಅಶ್ವ 4*4 ವಾಹನ ಎರಡು ಸೀಟ್, 4- ವೀಲ್ ಡ್ರೈವ್ ಎಟಿವಿ2 ಆಗಿದೆ. ಇದು ಸ್ಪೇಸ್ ಫ್ರೇಮ್ ಚಾಸಿಸ್ ಅನ್ನು ಆಧರಿಸಿದೆ ಮತ್ತು 3,556 ಎಂಎಂ ಉದ್ದ, 1,950 ಎಂಎಂ ಅಗಲ ಮತ್ತು 2,000 ಎಂಎಂ ಎತ್ತರ ಇದೆ. 2,600 ಎಂಎಂ ವೀಲ್ ಬೇಸ್ ಹೊಂದಿರುವ ಈ ವಾಹನ 950 ಕೆ. ಜಿ ತೂಕವಿದೆ. ಇದು 60 ಕೆ.ಜಿ ಸರಕು ಸಾಗಿಸುವ ಸಾಮರ್ಥ್ಯ ಹೊಂದಿದೆ.
ವಾಹನದ ಶಕ್ತಿ ಮತ್ತು ಕಾರ್ಯಕ್ಷಮತೆ : ಅಶ್ವ 4*4 ನ ಹೃದಯಭಾಗದಲ್ಲಿ ಪ್ರಬಲವಾದ 976 ಸಿಸಿ, 85.4 HP, 6500 ಆರ್ಪಿಎಂ ಹೆಚ್ಚಿನ ಸ್ಪೆಕ್ ಎಂಜಿನ್ ಹೊಂದಿದೆ.
ಮೊದಲ ಬಾರಿಗೆ ಭಾರತದಲ್ಲೇ ತಯಾರಾದ ವಾಹನ (ETV Bharat) ಆಫ್-ರೋಡ್ ಸಾಮರ್ಥ್ಯ : ಅಶ್ವ 4*4 ನ ಕಾರ್ಯಕ್ಷಮತೆ ಇದ್ದು, ಅದರ ಪ್ರಭಾವಶಾಲಿ ಭೂ ಪ್ರದೇಶ ಟ್ಯಾಕಲಿಂಗ್ ಸಾಮರ್ಥ್ಯಗಳಿಂದ ಮತ್ತಷ್ಟು ಬಲಗೊಳ್ಳುತ್ತದೆ. 2.65 ಡಿಗ್ರಿ ಇಳಿಜಾರಿನವರೆಗೆ ಏರುವ ಮತ್ತು 45 ಡಿಗ್ರಿಗಳವರೆಗಿನ ಅಡ್ಡ ಇಳಿಜಾರುಗಳನ್ನು ನ್ಯಾವಿಗೇಟ್ ಮಾಡುವ ಸಾಮರ್ಥ್ಯ ಹೊಂದಿದೆ. ಈ ಎಟಿವಿ ಅನ್ನು ಅತ್ಯಂತ ಸವಾಲಿನ ಭೂದೃಶ್ಯಗಳನ್ನು ವಶಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ.
ಅಶ್ವ-4*4 ವಾಹನ (ETV Bharat) ಈ ಕುರಿತು ಥಾನ್ ಆಲ್ಟೆರೈನ್ ಪ್ರೈವೆಟ್ ಲಿಮಿಟೆಡ್ನ ನಿರ್ದೇಶಕ ಸಂದೀಪ್ ಮಾತನಾಡಿ, "ಇಂಜಿನ್ 85 ಸಿಸಿ ಲೈಟ್ ವೈಟ್ ವೆಹಿಕಲ್ ಇದು. ಟ್ರ್ಯಾಕ್ ಟ್ರಾಲಿಯನ್ನು ಸಹ ಇದಕ್ಕೆ ಅಳವಡಿಸಬಹುದು. ಮರಳುಗಾಡು, ಗುಡ್ಡಗಾಡು, ಎರಡು ಅಡಿ ಗುಂಡಿ ಇದ್ದರೂ ಈ ವಾಹನ ಹೋಗುತ್ತದೆ. ಇದು ಪೆಟ್ರೋಲ್ ವಾಹನ, ಮುಂದಿನ ದಿನಗಳಲ್ಲಿ ಡೀಸೆಲ್ ವಾಹನವನ್ನು ತಯಾರು ಮಾಡುವ ಉದ್ದೇಶವಿದೆ " ಎಂದು ತಿಳಿಸಿದರು.
ಅಶ್ವ-4*4 ವಾಹನ (ETV Bharat) "ಇಂಡಿಯಾದಲ್ಲಿ ಹೊಸದಾಗಿ ತಯಾರಿಸಿರುವ ವಾಹನ. ಜಾಗತಿಕ ಮಟ್ಟದಲ್ಲೇ ಚೀನಾ ಮತ್ತು ಜಪಾನ್ನಲ್ಲಿ ಈ ರೀತಿಯ ವಾಹನಗಳನ್ನು ತಯಾರಿಸಲಾಗುತ್ತದೆ. ಇದೀಗ ಭಾರತದಲ್ಲೂ ತಯಾರಾಗುತ್ತಿದ್ದು, ಭಾರತ ನಾಲ್ಕನೇ ದೇಶವಾಗುತ್ತದೆ. ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನಲ್ಲಿ ವಾಹನ ತಯಾರಿಕಾ ಕಂಪನಿ ಇದೆ. ಬೆಂಗಳೂರಿನ ಇಂದಿರಾನಗರದಲ್ಲಿ ಕಚೇರಿ ಇದೆ. ಈಗಾಗಲೇ ಬುಕಿಂಗ್ ಆರಂಭಿಸಲಾಗಿದ್ದು, ಈ ವಾಹನದ ಸೇಲ್ ಫೆಬ್ರವರಿಯಿಂದ ಆರಂಭವಾಗುತ್ತದೆ. ಇದರ ಬೆಲೆ 22 ರಿಂದ 35 ಲಕ್ಷ ರೂವರೆಗೆ ಇದೆ " ಎನ್ನುತ್ತಾರೆ ಸಂದೀಪ್.
ಇದನ್ನೂ ಓದಿ :ತನ್ನ ಎಲ್ಲ ಹಳೆಯ ದಾಖಲೆ ಮುರಿದು ರಾಯಲ್ ಆದ ಎನ್ಫೀಲ್ಡ್! ಈ ಬಾರಿ ಬೈಕ್ಗಳು ಮಾರಾಟವಾಗಿದ್ದು ಎಷ್ಟು ಗೊತ್ತಾ? - ROYAL ENFIELD BIKES SALES REPORT