ಕರ್ನಾಟಕ

karnataka

ETV Bharat / state

ಸೂರಜ್ ರೇವಣ್ಣ ವಿರುದ್ಧ ಮತ್ತೊಂದು ಎಫ್​ಐಆರ್​ ದಾಖಲು - FIR Against Suraj Revanna - FIR AGAINST SURAJ REVANNA

ಸೂರಜ್ ರೇವಣ್ಣ ಪರವಾಗಿ ದೂರು ಕೊಟ್ಟಿದ್ದ ಹೊಳೆನರಸೀಪುರ ಮೂಲದ ಯುವಕ ಶಿವಕುಮಾರ್​ ಈಗ ವಿರುದ್ಧವಾಗಿ ದೂರು ನೀಡಿದ್ದಾನೆ. ಕೆಲ ವರ್ಷಗಳ ಹಿಂದೆ ತನ್ನ ಮೇಲೆಯೂ ಸೂರಜ್​ ರೇವಣ್ಣರಿಂದ ಅಸಹಜ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸೂರಜ್ ರೇವಣ್ಣ
ಸೂರಜ್ ರೇವಣ್ಣ (ETV Bharat)

By ETV Bharat Karnataka Team

Published : Jun 26, 2024, 10:37 AM IST

Updated : Jun 26, 2024, 10:52 AM IST

ಹಾಸನ:ಅಸಹಜ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ವಿಧಾನ ಪರಿಷತ್ ಸದಸ್ಯ ಡಾ.ಸೂರಜ್ ರೇವಣ್ಣ ವಿರುದ್ಧ ಮತ್ತೊಂದು ಎಫ್​ಐಆರ್ ದಾಖಲಾಗಿದೆ. ಜೂ.21ರಂದು ಸೂರಜ್ ಪರವಾಗಿ ದೂರು ಕೊಟ್ಟಿದ್ದ ಹೊಳೆನರಸೀಪುರ ಮೂಲದ ಯುವಕನೇ ಈಗ ಸೂರಜ್ ವಿರುದ್ಧವಾಗಿ ದೂರು ನೀಡಿದ್ದಾನೆ.

ಕೆಲ ವರ್ಷಗಳ ಹಿಂದೆ ತನ್ನ ಮೇಲೆ ಅಸಹಜ ಲೈಂಗಿಕ ದೌರ್ಜನ್ಯ ನಡೆದಿದೆ ಎಂದು ಆರೋಪಿಸಿ ಹೊಳೆನರಸೀಪುರ ಗ್ರಾಮಾಂತರ ಠಾಣೆಯಲ್ಲೇ ದೂರು ನೀಡಿದ್ದಾನೆ. ಸಂತ್ರಸ್ತನ ದೂರನ್ನು ಆಧಾರಿಸಿ ಸೂರಜ್ ವಿರುದ್ಧ ಐಪಿಸಿ ಸೆಕ್ಷೆನ್ 377, 342, 506ರಡಿ ಎಫ್ಐಆರ್ ದಾಖಲಾಗಿದೆ. ಅರಕಲಗೂಡು ಮೂಲದ ಯುವಕನ ವಿರುದ್ಧ ದೂರು ನೀಡಲು ಸೂರಜ್ ಒತ್ತಡ ಹಾಕಿದ್ದರು. ಕೊರೊನಾ ಸಮಯದಲ್ಲಿ ತನ್ನ ಮೇಲೆ ಕೂಡ ಇದೇ ರೀತಿಯ ಅಸ್ವಾಭಾವಿಕ ಲೈಂಗಿಕ ದೌರ್ಜನ್ಯವನ್ನು ಸೂರಜ್ ಎಸಗಿದ್ದರು ಎಂದು ಸಂತ್ರಸ್ತ ದೂರಿನಲ್ಲಿ ಉಲ್ಲೇಖಿಸಿದ್ದಾನೆ.

ಇನ್ನು ಸೂರಜ್ ರೇವಣ್ಣಗೆ ಬ್ಲಾಕ್ ಮೇಲ್ ಮಾಡಲಾಗಿದೆ ಎಂದು ದೂರು ನೀಡಿದ್ದ ಯುವಕನ ವಿರುದ್ಧ ಹಣ ದುರುಪಯೋಗ ಆರೋಪದಲ್ಲಿ ಎಫ್​ಐಆರ್ ದಾಖಲಾಗಿದೆ. ಶ್ರೀರಾಮ್ ಫೈನಾನ್ಸ್​ನ ರಾಮನಾಥಪುರ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಈತನ ಮೇಲೆ ವಾಹನ ಸಾಲ ಪಡೆದ ಗ್ರಾಹಕರು ನೀಡಿದ್ದ ಹಣವನ್ನು ದುರ್ಬಳಕೆ ಮಾಡಿದ ಆರೋಪ ಕೇಳಿ ಬಂದಿದೆ. ವಾಹನ ಸಾಲದ ವಂತಿಗೆ ಕಟ್ಟಲು ನೀಡಿದ್ದ 2,91,916 ರೂ. ಹಣವನ್ನು ದುರ್ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ರಾಮನಾಥಪುರ ಶಾಖೆಯ ಮ್ಯಾನೇಜರ್ ಕೇಶವಮೂರ್ತಿ ಜೂ.21ರಂದು ಕೊಣನೂರು ಠಾಣೆಗೆ ದೂರು ನೀಡಿದ್ದಾರೆ.

ಇದನ್ನೂ ಓದಿ:ಸಲಿಂಗ ಕಾಮ: ಸೂರಜ್ ರೇವಣ್ಣ ವಿರುದ್ಧ 2ನೇ ಎಫ್‌ಐಆರ್‌ ದಾಖಲು - Suraj Revanna

Last Updated : Jun 26, 2024, 10:52 AM IST

ABOUT THE AUTHOR

...view details