ಕರ್ನಾಟಕ

karnataka

ETV Bharat / entertainment

ಭವ್ಯಾ - ತ್ರಿವಿಕ್ರಮ್​ ಮನಸ್ತಾಪ: ಬಿಗ್​ ಬಾಸ್​ ಅಖಾಡದಲ್ಲಿ ದೋಸ್ತಿಗಳು ಈಗ ದೂರ ದೂರ! - BHAVYA TRIVIKRAM

ಸದಾ ಜೊತೆಯಾಗೇ ಕಾಣಿಸಿಕೊಳ್ಳುತ್ತಿದ್ದ ಭವ್ಯಾ ಮತ್ತು ತ್ರಿವಿಕ್ರಮ್​ ನಡುವೆ ಮನಸ್ತಾಪವಾಗಿದೆ.

Bhavya Trivikram
ಭವ್ಯಾ ತ್ರಿವಿಕ್ರಮ್​ (Photo: Bigg Boss Team)

By ETV Bharat Entertainment Team

Published : Jan 13, 2025, 4:32 PM IST

ಕನ್ನಡ ಕಿರುತೆರೆಯ ಜನಪ್ರಿಯ ಕಾರ್ಯಕ್ರಮ ಬಿಗ್​ ಬಾಸ್​ ಸೀನಸ್​ 11 ಇನ್ನೇನು ಎರಡು ವಾರಗಳಲ್ಲಿ ಕೊನೆಗೊಳ್ಳಲಿದೆ. ಮನೆಯಲ್ಲಿ ಆಟದ ಜೊತೆ ವ್ಯಕ್ತಿತ್ವಗಳು, ಸ್ನೇಹ ಸಂಬಂಧಗಳೂ ಬದಲಾಗುತ್ತಿದ್ದು, ರೋಚಕವಾಗಿ ಸಾಗಿದೆ. ಕಳೆದ ಸಂಚಿಕೆಯಲ್ಲಿ ನನ್ನ ಆಟಕ್ಕೆ ತ್ರಿವಿಕ್ರಮ್ ಅಡ್ಡಿಯಾಗಿದ್ದಾರೆ ಎಂದು ತಿಳಿಸಿದ್ದ ಭವ್ಯಾ ಅವರ ವಿರುದ್ಧ ಇಂದಿನ ಟಾಸ್ಕ್​​ನಲ್ಲಿ ತ್ರಿವಿಕ್ರಮ್ ಅಸಮಾಧಾನಗೊಂಡಿದ್ದಾರೆ. ಇಬ್ಬರ ನಡುವೆ ಮನಸ್ತಾಪ ಮೂಡಿದೆ ಅನ್ನೋದು ಸ್ಪಷ್ಟವಾಗಿದೆ. ಇದರ ಒಂದು ಸುಳಿವು ಪ್ರೋಮೋದಲ್ಲಿ ಸಿಕ್ಕಿದೆ.

'ಸೆಮಿ-ಫಿನಾಲೆ ಅಖಾಡದಲ್ಲಿ ದೋಸ್ತಿಗಳು ದೂರ ದೂರ!' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್​​ನಡಿ ಪ್ರೋಮೋ ಅನಾವರಣಗೊಂಡಿದೆ. ಆಪ್ತ ಸ್ನೇಹಿತರಾಗಿ ಗುರುತಿಸಿಕೊಂಡಿರುವ ಭವ್ಯಾ ಮತ್ತು ತ್ರಿವಿಕ್ರಮ್ ನಡುವೆ ಮಾತಿಗೆ ಮಾತು ಬೆಳೆದಿದೆ. ನಿನ್ನೆಯಷ್ಟೇ ನನ್ನ ಆಟಕ್ಕೆ ತ್ರಿವಿಕ್ರಮ್ ಅಡ್ಡಿಯಾಗಿದ್ದಾರೆ ಎಂದು ಭವ್ಯಾ ತಿಳಿಸಿದ್ದರು. ಇದೀಗ ಆಟದ ಸಲುವಾಗಿ ಮಾತು ನಿಲ್ಲಿಸುವಂತೆ ತೋರುತ್ತಿದೆ. ಮುಂದೆ ಏನಾಗಲಿದೆ ಎಂದು ಪ್ರೇಕ್ಷಕರು ಕಳವಳ ವ್ಯಕ್ತಪಡಿಸಿದ್ದಾರೆ.

ಚೆಂಡು ಕೆಳಗೆ ಬೀಳದಂತೆ ಸಂಭಾಳಿಸುತ್ತಾ, ಅಲ್ಲಿರುವ ಬಾಸ್ಕೆಟ್​ನಲ್ಲಿ ಬೀಳಿಸಬೇಕು. ಮೋಕ್ಷಿತಾ, ಧನರಾಜ್​​, ತ್ರಿವಿಕ್ರಮ್​, ಭವ್ಯಾ ಆಟಕ್ಕಿಳಿದಿದ್ದಾರೆ. ತ್ರಿವಿಕ್ರಮ್​ಗೆ ಆಟದ ಉಸ್ತುವಾರಿ ವಹಿಸಿರುವ ಹನುಮಂತು ಫೌಲ್​ ನೀಡಿದ್ದಾರೆ. ಫೌಲ್​ ಅಲ್ಲ, ಫಸ್ಟಿಂದ ಆಡಿಸಬೇಕು ಹನುಮಂತು ಎಂದು ಸಹ ಸ್ಪರ್ಧಿಗಳು ಸಲಹೆ ಕೊಟ್ಟಿದ್ದಾರೆ. ನಂತರ, ತ್ರಿವಿಕ್ರಮ್​ಗೆ ಆಟವನ್ನು ಮೊದಲಿನಿಂದ ಆರಂಭಿಸುವಂತೆ ಬಿಗ್ ಬಾಸ್​ ಸೂಚಿಸಿದ್ದಾರೆ. ಕೂಡಲೇ ನಗುಮೊಗದಲ್ಲಿ ಚಪ್ಪಾಳೆ ಹೊಡೆದು ಥ್ಯಾಂಕ್​ ಯೂ ಬಿಗ್​ ಬಾಸ್​​ ಎಂದು ಭವ್ಯಾ ತಿಳಿಸಿದ್ದಾರೆ. ಆಟದಲ್ಲಿ ಭವ್ಯಾ ಕೂಡಾ ಇದ್ದ ಹಿನ್ನೆಲೆ ಗೆಲುವು ಅವರಿಗೂ ಅವಶ್ಯಕತೆ ಇದೆ.

ಇದನ್ನೂ ಓದಿ:ಐಶ್ವರ್ಯಾ ರೈ ವಿರುದ್ಧದ ಸ್ಪರ್ಧೆಯಿಂದ ಆಧ್ಯಾತ್ಮಿಕತೆವರೆಗೆ: ನಟನೆ ತೊರೆದು ಸನ್ಯಾಸಿಯಾದ ಈ ನಟಿ ಬಗ್ಗೆ ನಿಮಗೆಷ್ಟು ಗೊತ್ತು?

ಭವ್ಯಾ ಮತ್ತು ತ್ರಿವಿಕ್ರಮ್​​ ನಡುವೆ ಮಾತುಕತೆ:ಆಟ ಮುಗಿದ ಬಳಿಕ ವಾಶ್​ ರೂಮ್​​ ಏರಿಯಾದಲ್ಲಿ ಭವ್ಯಾ ಮತ್ತು ತ್ರಿವಿಕ್ರಮ್​​ ನಡುವೆ ಮಾತುಕತೆ ನಡೆದಿದೆ. ನಾನು ಸೋತ ತಕ್ಷಣ ನಿನ್ನ ರಿಯಾಕ್ಷನ್​ ಹೇಗಿತ್ತು ಅನ್ನೋದನ್ನು ನೋಡ್ದೆ ಎಂದು ತ್ರಿವಿಕ್ರಮ್​​ ತಿಳಿಸಿದ್ದು, ಭವ್ಯಾ ಅಸಮಾಧಾನಗೊಂಡಿದ್ದಾರೆ. ನಿಮ್ಮ ಕಾರಣ ಇಟ್ಟುಕೊಂಡು ನಾನೇಕೆ ಬೇಸರ ಮಾಡ್ಕೊಳ್ಳಿ ಎಂದು ಭವ್ಯಾ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:ಕುಗ್ಗಿದ 'ಗೇಮ್​ ಚೇಂಜರ್'​: ಮೊದಲ ದಿನ 51 ಕೋಟಿ, ಭಾನುವಾರ 17; ಸಂಕ್ರಾಂತಿ ರಜೆ ಬಳಸಿಕೊಳ್ಳುತ್ತಾ ರಾಮ್​ಚರಣ್​ ಸಿನಿಮಾ

ನಂತರ ರಜತ್​ ಬಳಿ ಏನ್​ ಆಡ್ತಾರೆ ಜನ ಎಂದು ತ್ರಿವಿಕ್ರಮ್ ತಮ್ಮ ಅಸಮಾಧಾನಗಳನ್ನು ಹೊರಹಾಕುತ್ತಿದ್ದಂತೆ ಮೈಂಡ್​ ಯುವರ್​ ಲ್ಯಾಂಗ್ವೇಜ್​ ಎಂದು ಭವ್ಯಾ ತಿಳಿಸಿದ್ದಾರೆ. ಕೋಪಗೊಂಡ ತ್ರಿವಿಕ್ರಮ್​ ನಾನ್​ ನಿನ್​ ಹತ್ರ ಮಾತನಾಡುತ್ತಿದ್ದೀನಾ? ಎಂದು ಕೇಳಿದ್ದಾರೆ. ನಿನ್ ಹತ್ರ ಮಾತಾಡ್ತಿಲ್ಲ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಸದಾ ಒಟ್ಟಿಗೆ ಕುಳಿತು ಸಮಯ ಕಳೆಯುತ್ತಿದ್ದ ಸ್ನೇಹಿತರು ತಮ್ಮ ಹಾದಿ ಬದಲಾಯಿಸಿಕೊಂಡಿದ್ದಾರೆ. ತಮ್ಮ ಇಡೀ ಬಿಗ್​ ಬಾಸ್​ ಪಯಣದಲ್ಲಿ ಇದು ಮೊದಲ ಮನಸ್ತಾಪ ಎನ್ನಬಹುದು. ಮುಂದೇನಾಗುತ್ತೆ?, ಸಮಸ್ಯೆ ಸರಿಪಡಿಸಿಕೊಳ್ತಾರಾ? ಅನ್ನೋ ಕುತೂಹಲದಲ್ಲಿ ಪ್ರೇಕ್ಷಕರಿದ್ದಾರೆ.

ABOUT THE AUTHOR

...view details