ಕರ್ನಾಟಕ

karnataka

ETV Bharat / education-and-career

ಹೆಸ್ಕಾಂನಲ್ಲಿ 338 ಅಪ್ರೆಂಟಿಸ್​ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ - HESCOM Apprentice Jobs - HESCOM APPRENTICE JOBS

ಹೆಸ್ಕಾಂನಲ್ಲಿ ಅಪ್ರೆಂಟಿಸ್​ ಹುದ್ದೆಗಳ ಭರ್ತಿಗೆ ಅರ್ಹ ಪದವೀಧರರು ಮತ್ತು ಡಿಪ್ಲೊಮಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

graduate and diploma Apprentice Recruitment notification By hescom
ಸಂಗ್ರಹ ಚಿತ್ರ (ETV Bharat)

By ETV Bharat Karnataka Team

Published : Aug 13, 2024, 5:51 PM IST

ಬೆಂಗಳೂರು: ಹುಬ್ಬಳ್ಳಿ ವಿದ್ಯುತ್​ ಸರಬರಾಜು ಕಂಪನಿ ನಿಯಮಿತ (ಹೆಸ್ಕಾಂ)ನಲ್ಲಿ 338 ಅಪ್ರೆಂಟಿಸ್​ ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಒಂದು ವರ್ಷದ ಅವಧಿಯ ನೇಮಕಾತಿಗೆ ಅರ್ಹ ಪದವೀಧರರು ಮತ್ತು ಡಿಪ್ಲೊಮಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ವಿವರ:

  • ಪದವೀಧರ ಅಪ್ರೆಂಟಿಸ್​ ಹುದ್ದೆಗಳು - 200
  • ಡಿಪ್ಲೊಮಾ ಅಪ್ರೆಂಟಿಸ್​ ಹುದ್ದೆಗಳು - 138

ವಿದ್ಯಾರ್ಹತೆ:ಪದವೀಧರ ಅಪ್ರೆಂಟಿಸ್​ಗೆ ಎಲೆಕ್ಟ್ರಾನಿಕ್​ ಮತ್ತು ಎಲೆಕ್ಟ್ರಿಕಲ್​ ವಿಷಯದಲ್ಲಿ ಬಿಇ ಅಥವಾ ಬಿ.ಟೆಕ್​ ಪದವಿ ಹೊಂದಿರಬೇಕು.

ಡಿಪ್ಲೊಮಾ ಅಪ್ರೆಂಟಿಸ್​ ಹುದ್ದೆ: ಎಲೆಕ್ಟ್ರಾನಿಕ್​ ಮತ್ತು ಎಲೆಕ್ಟ್ರಿಕಲ್​ ವಿಷಯದಲ್ಲಿ 3 ವರ್ಷದ ಡಿಪ್ಲೊಮಾ ಪದವಿ ಹೊಂದಿರಬೇಕು.

ವಯೋಮಿತಿ: ಅಪ್ರೆಂಟಿಸ್​ಶಿಪ್​ ನಿಯಮದ ಪ್ರಕಾರ.

ವೇತನ: ಪದವೀಧರ ಅಪ್ರೆಂಟಿಸ್​ -9,000 ಹಾಗೂ ಡಿಪ್ಲೊಮಾ ಅಪ್ರೆಂಟಿಸ್‌ಗೆ 8,000 ರೂ ಸ್ಟೈಫಂಡ್​ ನೀಡಲಾಗುತ್ತದೆ.

ಆಯ್ಕೆ ಹೇಗೆ?: ಈ ಹುದ್ದೆಗಳ ಅವಧಿ ಒಂದು ವರ್ಷ. ಅಭ್ಯರ್ಥಿಗಳನ್ನು ಮೆರಿಟ್​, ದಾಖಲಾತಿ ಪರಿಶೀಲನೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.

ಅರ್ಜಿ ಸಲ್ಲಿಕೆ ವಿಧಾನ: ರಾಷ್ಟ್ರೀಯ ವೆಬ್​ ಪೋರ್ಟಲ್​ ಎನ್​ಎಟಿ ಮೂಲಕ ಅರ್ಜಿ ಸಲ್ಲಿಸಬೇಕು. nars.education.gov.in/ ಇಲ್ಲಿಗೆ ಭೇಟಿ ನೀಡಿ ನೋಂದಣಿ ನಡೆಸಬೇಕು. ಎರಡನೇ ಹಂತದ ಲಾಗಿನ್‌ನಲ್ಲಿ ಹೆಸ್ಕಾಂ ಅಪ್ರೆಂಟಿಸ್​ ಹುದ್ದೆಗೆ ಅರ್ಜಿ ಸಲ್ಲಿಸಬೇಕು. ಇದಕ್ಕೆ ಯಾವುದೇ ಶುಲ್ಕವಿಲ್ಲ. ಅರ್ಜಿ ಸಲ್ಲಿಸಲು ಕಡೇಯ ದಿನ ಆಗಸ್ಟ್​ 20. ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ ಅಭ್ಯರ್ಥಿಗಳು hescom.karnataka.gov.in ಇಲ್ಲಿಗೆ ಭೇಟಿ ನೀಡಬಹುದು.

ಅಧಿಸೂಚನೆ (HESCOM)

ವಿಜಯಪುರದಲ್ಲಿ ನರ್ಸ್​ ಹುದ್ದೆಗಳ ನೇಮಕಾತಿ: ವಿಜಯಪುರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ನರ್ಸ್​ ಮತ್ತು ಕಿರಿಯ ಪ್ರಯೋಗಾಲಯ ಸಹಾಯಕರ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ.

ಸ್ಟಾಫ್​​ ನರ್ಸ್​- 55 ಮತ್ತು ಕಿರಿಯ ಪ್ರಯೋಗಾಲಯ ತಂತ್ರಜ್ಞರು- 15 ಹುದ್ದೆಗಳಿವೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ನರ್ಸಿಂಗ್​ನಲ್ಲಿ ಡಿಪ್ಲೊಮಾ ಅಥವಾ ಬಿಎಸ್ಸಿ ನರ್ಸಿಂಗ್​ ಪೂರ್ಣಗೊಳಿಸಿರಬೇಕು. ಕಿರಿಯ ಪ್ರಯೋಗಾಲಯ ತಂತ್ರಜ್ಞರ ಹುದ್ದೆಗೆ ಅಭ್ಯರ್ಥಿಗಳು 10ನೇ ತರಗತಿಯೊಂದಿಗೆ ಲ್ಯಾಬ್​ ಟೆಕ್ನಿಷಿಯನ್​ನಲ್ಲಿ ಡಿಪ್ಲೊಮಾ ಪದವಿ ಹೊಂದಿರಬೇಕು.

ವಿಜಯಪುರದ ಜಿಲ್ಲಾಡಳಿತ ವೆಬ್​ತಾಣದಲ್ಲಿ ಲಭ್ಯವಿರುವ ಅಧಿಕೃತ ಅಧಿಸೂಚನೆಯೊಂದಿಗೆ ನೀಡಲಾಗಿರುವ ನಿಗದಿತ ಅರ್ಜಿಗಳನ್ನು ಪಡೆದು ಭರ್ತಿ ಮಾಡಿ, ಅಗತ್ಯ ದಾಖಲೆಗಳೊಂದಿಗೆ ಕೆಳಗಿನ ವಿಳಾಸಕ್ಕೆ ಸಲ್ಲಿಸಬೇಕು.

ವಿಳಾಸ: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಾರ್ಯಾಲಯದ ಸಭಾ ಭವನ ವಿಜಯಪುರ.

ಈ ಕುರಿತು ಹೆಚ್ಚಿನ ಮಾಹಿತಿಗೆ vijayapura.nic.inಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ:ಐಟಿಐ ತೇರ್ಗಡೆಯಾದವರಿಗೆ ದುಬೈ ಶಿಪ್ ಯಾರ್ಡ್​ನಲ್ಲಿ ತರಬೇತಿ: ಅರ್ಜಿ ಆಹ್ವಾನ

ABOUT THE AUTHOR

...view details