ಹೈದರಾಬಾದ್:ನಮ್ಮ ಅಗತ್ಯ ಮತ್ತು ಅನಿವಾರ್ಯಕ್ಕಾಗಿ ಸಾಲ ಮಾಡುತ್ತೇವೆ. ಈ ವೇಳೆ ನಾವು ಪರಿಚಯರೋ ಅಥವಾ ಬ್ಯಾಂಕ್‌ಗಳಿಂದಲೋ ಸಾಲ ತೆಗೆದುಕೊಳ್ಳುತ್ತೇವೆ. ಪರಿಚಯಸ್ಥರಿಂದ ಸಾಲ ಪಡೆಯುವುದು ಸುಲಭ. ಆದರೆ, ಬ್ಯಾಂಕ್‌ಗಳಿಂದ ಸಾಲ ಪಡೆಯುವುದು ಬಲು ಕಷ್ಟ. ಏಕೆಂದರೆ ಬ್ಯಾಂಕ್‌ಗಳು ಸಾಲ ನೀಡಲು ಇನ್ನಿಲ್ಲದ ಷರತ್ತುಗಳನ್ನು ವಿಧಿಸುವುದರೊಂದಿಗೆ ಅನೇಕ ದಾಖಲೆಗಳನ್ನು ಕೇಳುತ್ತವೆ.
ನಮ್ಮ ಆರ್ಥಿಕ ಸ್ಥಿತಿ, ಅರ್ಹತೆಗಳು, ಬರುವ ಆದಾಯ ಎಷ್ಟು ಎಂಬುದನ್ನು ಪರಿಗಣಿಸಿ ಬ್ಯಾಂಕುಗಳು ಸಾಲದ ಅರ್ಜಿಯನ್ನು ಪರಿಗಣಿಸುತ್ತವೆ. ಇದರಲ್ಲಿ ಒಂದು ಲೋಪ ಕಂಡುಬಂದರೂ, ಅರ್ಜಿಯನ್ನು ನಿರಾಕರಿಸುತ್ತವೆ. ಇಂತಹ ಸ್ಥಿತಿ ಎದುರಾದಾಗ ನಾವು ತುಸು ಎಚ್ಚರ ವಹಿಸಬೇಕು. ಸಾಲವನ್ನು ಏಕೆ ನಿರಾಕರಿಸಲಾಗಿದೆ ಎಂಬುದನ್ನು ಕಂಡುಕೊಳ್ಳಬೇಕು. ಆಗ ಮಾತ್ರ ಭವಿಷ್ಯದಲ್ಲಿ ಇಂತಹ ನಿರಾಕರಣೆಯಿಂದ ತಪ್ಪಿಸಲು ಸಾಧ್ಯ.
ಈ ಹಂತಗಳನ್ನು ದಾಟಲೇಬೇಕು:ಈ ಹಿಂದೆ ಸಾಲಕ್ಕಾಗಿ ಬ್ಯಾಂಕ್‌ಗೆ ಅರ್ಜಿ ಹಾಕಿದಾಗ, ಅದರ ಪರಿಶೀಲನಾ ಪ್ರಕ್ರಿಯೆ ವಿಳಂಬವಾಗುತ್ತಿತ್ತು. ಇದೀಗ, ಕೆಲವು ಬ್ಯಾಂಕ್ಗಳ AI ತಂತ್ರಜ್ಞಾನ ಅಳವಡಿಸಿಕೊಂಡಿದ್ದರಿಂದ, ಅರ್ಜಿ ಪರಿಶೀಲನೆ ತ್ವರಿತಗತಿಯಲ್ಲಿ ನಡೆಯುತ್ತದೆ. AI ಸಾಫ್ಟ್ವೇರ್ನಿಂದ ನಮ್ಮ ಹಿಂದಿನ ಸಾಲ, ಆದಾಯದ ಮೂಲ, ಸಿಬಿಲ್ ಸ್ಕೋರ್ ಪರಿಗಣಿಸಿ ಎಷ್ಟು ಸಾಲ ನೀಡಬೇಕು ಎಂಬುದನ್ನು ಬ್ಯಾಂಕ್ ನಿರ್ಧರಿಸುತ್ತದೆ.
ಈ ಕಾರಣಗಳಿಂದ ಸಾಲ ಸಿಗಲ್ಲ:ಈಗಾಗಲೇ ಬ್ಯಾಂಕ್ ಸಾಲ ಪಡೆದವರು, ಕ್ರೆಡಿಟ್ ಕಾರ್ಡ್ನಲ್ಲಿ ಹಣ ಬಾಕಿ ಉಳಿಸಿಕೊಂಡವರ ಸಾಲದ ಅರ್ಜಿಗೆ ಅನುಮೋದನೆ ಸಿಗುವುದು ಕಷ್ಟಸಾಧ್ಯ. ಹಳೆಯ ಸಾಲ ತೀರಿಸಲು ನಮಗಿರುವ ಆದಾಯ ಸಾಕಾಗದು ಎಂದು ಬ್ಯಾಂಕ್‌ಗಳು ಹೊಸ ಸಾಲ ನೀಡಲು ನಿರಾಕರಿಸುತ್ತವೆ. ಇರುವ ಸಾಲಕ್ಕೆ ತಡವಾಗಿ EMI ಗಳನ್ನು ಕಟ್ಟುತ್ತಿದ್ದರೂ ಸಹ ಹೊಸ ಸಾಲ ಮಂಜೂರಾತಿಗೆ ಪರಿಗಣಿತವಾಗುವುದಿಲ್ಲ.