ಕರ್ನಾಟಕ

karnataka

ETV Bharat / bharat

ಹೈದರಾಬಾದ್​ನಲ್ಲಿ ಪ್ರಿಯಕರನೊಂದಿಗೆ ಸೇರಿ 3ನೇ ಪತಿಯನ್ನು ಕೊಂದು, ಕೊಡಗಿನಲ್ಲಿ ಸುಟ್ಟು ಹಾಕಿದ ಪತ್ನಿ! - KODAGU BURNT BODY CASE

Woman Killed Her Husband: ಇತ್ತೀಚೆಗೆ ಕೊಡಗಿನಲ್ಲಿ ತುಂಡರಿಸಿದ ವ್ಯಕ್ತಿಯ ದೇಹ ಅರ್ಧಂಬರ್ಧಂ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣವನ್ನು ಬೆನ್ನಟ್ಟಿ ಹೋದ ಪೊಲೀಸರಿಗೆ ಅಚ್ಚರಿಯ ಸಂಗತಿಯೊಂದು ತಿಳಿದಿದೆ. ಅದೇನೆಂಬುದು ತಿಳಿಯೋಣ ಬನ್ನಿ.

WOMAN KILLED HER HUSBAND  MURDER IN HYDERABAD  BODY BURNT IN KODAGU  WIFE KILLS HUSBAND
ಪತಿಯನ್ನು ಕೊಲೆ ಮಾಡಿದ ಪತ್ನಿ (ETV Bharat)

By ETV Bharat Karnataka Team

Published : Oct 28, 2024, 1:41 PM IST

Woman Killed Her Husband in Hyderabad: ಆಕೆ ಮೂರು ಬಾರಿ ಮದುವೆಯಾಗಿದ್ದಳು. ಹಣದ ದುರಾಸೆಯಿಂದ ಆಸ್ತಿಗಾಗಿ ತನ್ನ ಪ್ರಿಯಕರನ ಜೊತೆ ಸೇರಿ ಮೂರನೇ ಪತಿಯನ್ನು ಕೊಂದಿದ್ದಾಳೆ. ಹೈದರಾಬಾದಿನಲ್ಲಿ ಆತನನ್ನು ಕೊಂದು ಶವವನ್ನು ಕಾರಿನಲ್ಲಿ ಕರ್ನಾಟಕಕ್ಕೆ ಕೊಂಡೊಯ್ದು ಅಲ್ಲಿ ಸುಟ್ಟು ಹಾಕಿದ್ದಳು. ಕರ್ನಾಟಕ ಪೊಲೀಸರ ತನಿಖೆಯಿಂದ ವಿಷಯ ಬಹಿರಂಗಗೊಂಡ ನಂತರ ಆಕೆಯನ್ನು ಇತರ ಇಬ್ಬರೊಂದಿಗೆ ಬಂಧಿಸಲಾಗಿದೆ.

ತೆಲಂಗಾಣದ ಭುವನಗಿರಿ ಜಿಲ್ಲಾ ಕೇಂದ್ರದ ನಿಹಾರಿಕಾ (29) ಎರಡು ಮದುವೆಯಾಗಿ ವಿಚ್ಛೇದನ ಪಡೆದಿದ್ದಾಳೆ. ಮೊದಲ ಮದುವೆಯಾಗಿದ್ದು ಬೆಂಗಳೂರಿನ ಸಾಫ್ಟ್ ವೇರ್ ಇಂಜಿನಿಯರ್ ಹಾಗೂ ಎರಡನೇ ಮದುವೆಯಾಗಿದ್ದು, ಹರಿಯಾಣದ ವ್ಯಕ್ತಿಯೊಂದಿಗೆ. ಹರಿಯಾಣದ ಎರಡನೇ ಪತಿ ದಾಖಲಿಸಿದ್ದ ಪ್ರಕರಣದಲ್ಲಿ ಆಕೆ ಜೈಲಿಗೆ ಹೋದಾಗ ಅಲ್ಲಿನ ಮತ್ತೊಬ್ಬ ಮಹಿಳಾ ಕೈದಿಯ ಸಂಪರ್ಕಕ್ಕೆ ಬಂದಿದ್ದಳು. ಈ ಪ್ರಕ್ರಿಯೆಯಲ್ಲಿ ಆಕೆಯ ಮಗ ರಾಣಾನ ಪ್ರೀತಿಯಲ್ಲಿ ಬಿದ್ದಿದ್ದಳು. ನಂತರ ಕರ್ನಾಟಕದ ಬೆಂಗಳೂರಿಗೆ ಸ್ಥಳಾಂತರಗೊಂಡರು.

ಮ್ಯಾಟ್ರಿಮೋನಿ ಪ್ಲಾಟ್‌ಫಾರ್ಮ್ ಮೂಲಕ ಸಂಪರ್ಕ:ಇನ್ನು ಆರೋಪಿ ನಿಹಾರಿಕಾ ಹೈದರಾಬಾದ್‌ನ ತುಕಾರಾಂಗೇಟ್‌ನ ರಿಯಲ್ ಎಸ್ಟೇಟ್ ವ್ಯಾಪಾರಿ ರಮೇಶ್ ಕುಮಾರ್ ಜೊತೆ ಮ್ಯಾಟ್ರಿಮೋನಿ ಪ್ಲಾಟ್‌ಫಾರ್ಮ್ ಮೂಲಕ ಸಂಪರ್ಕ ಹೊಂದಿದ್ದಳು. ಬೆಂಗಳೂರಿನಲ್ಲಿ ಸಾಫ್ಟ್ ವೇರ್ ಕೆಲಸ ಮಾಡುತ್ತಿರುವುದಾಗಿ ಕುಮಾರ್​ಗೆ ತಿಳಿಸಿದ್ದಳು.

ಅನುಮಾನ: ರಮೇಶನಿಗೆ ಈಗಾಗಲೇ ಪತ್ನಿ ಹಾಗೂ ಮಗಳಿದ್ದಾರೆ. ಆದರೂ ಇಬ್ಬರೂ 2018 ರಲ್ಲಿ ತಮ್ಮ ರಿಜಿಸ್ಟರ್​ ಮದುವೆ ಮಾಡಿಕೊಂಡಿದ್ದರು. ಘಟಕೇಸರ್ ಬಳಿಯ ಪೋಚಾರಂ ಸಂಕ್ಷತ್ರಿ ಟೌನ್‌ಶಿಪ್‌ನಲ್ಲಿ ಜೀವನ ನಡೆಸುತ್ತಿದ್ದರು. ನಿಹಾರಿಕಾ ಕೆಲಸದ ನಿಮಿತ್ತ ಬೆಂಗಳೂರಿಗೆ ಹೋಗುತ್ತಿದ್ದರು. ಈ ಕ್ರಮದಲ್ಲಿ ಇದೇ ತಿಂಗಳ (ಅಕ್ಟೋಬರ್) 4ರಂದು ನಿಹಾರಿಕಾ ಪೋಚಾರಂಗೆ ಬಂದಾಗ ಆಕೆಯ ವರ್ತನೆಯಿಂದ ಮೊದಲೇ ಅನುಮಾನಗೊಂಡ ರಮೇಶ್ ಕುಮಾರ್ ಆಕೆಯನ್ನು ತಡೆದಿದ್ದು ವಿವಾದಕ್ಕೆ ಕಾರಣವಾಗಿದೆ. ನಿಹಾರಿಕಾ ಮನೆಯಿಂದ ಹೊರಗೆ ಹೋಗಿ ಬಾಯ್ ಫ್ರೆಂಡ್ ರಾಣಾ ಜೊತೆ ವಾಪಸ್​ ಆಗಿದ್ದಾಳೆ.

ಕುಮಾರ್​, ರಾಣಾ ಮತ್ತು ನಿಹಾರಿಕಾ ಮೂವರೂ ಒಟ್ಟಿಗೆ ಮದ್ಯ ಸೇವಿಸಿದ್ದಾರೆ. ರಾತ್ರಿ 11 ಗಂಟೆ ಸುಮಾರಿಗೆ ಕಾರಿನಲ್ಲಿ ಹೊರಟರು. ನಿಹಾರಿಕಾ ಮತ್ತು ರಾಣಾ ಕೊಲೆ ಮಾಡುವ ಮುನ್ನ ಪ್ಲಾನ್​ ಹಾಕಿಕೊಂಡಿದ್ದರು. ಮೇಡಿಪಲ್ಲಿ ಪೊಲೀಸ್ ಠಾಣಾ ವ್ಯಾಪ್ತಿಯ ಪೀರ್ಜಾಡಿಗುಡ ಕಮಾನ್ ಎಂಬಲ್ಲಿ ಕಾರಿನಲ್ಲಿ ಬಂದ ಆರೋಪಿಗಳು ರಮೇಶ್ ಅವರನ್ನು ಹೊಡೆದು ಕೊಂದಿದ್ದಾರೆ. ಬೆಂಗಳೂರಿನಲ್ಲಿರುವ ಮತ್ತೊಬ್ಬ ಗೆಳೆಯ ನಿಖಿಲ್ ರೆಡ್ಡಿಗೆ ನಿಹಾರಿಕಾ ಈ ವಿಷಯ ತಿಳಿಸಿದ್ದಾರೆ. ಅವರ ಸಲಹೆ ಮತ್ತು ಸೂಚನೆಗಳೊಂದಿಗೆ ಮೃತ ದೇಹವನ್ನು ಕರ್ನಾಟಕದ ಕೊಡುಗು ಜಿಲ್ಲೆಯ ಸುಂಟಿಕುಪ್ಪಾ ಪ್ರದೇಶಕ್ಕೆ ಕೊಂಡೊಯ್ದಿದ್ದರು.

ಕಾಪಿ ತೋಟದಲ್ಲಿ ಕತ್ತರಿಸಿ ಸುಟ್ಟುಹಾಕಿದ ಆರೋಪಿಗಳು:ಅಲ್ಲಿ ಕಾಫಿ ತೋಟದಲ್ಲಿ ಮೃತದೇಹವನ್ನು ಕತ್ತರಿಸಿ ಸುಟ್ಟು ಹಾಕಿದ್ದಾರೆ. ಅಕ್ಟೋಬರ್ 8 ರಂದು ಸ್ಥಳೀಯರು ಶವವನ್ನು ಕಂಡು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದರು. ಕಾಫಿ ತೋಟ ಹಾಗೂ ಸುತ್ತಮುತ್ತಲಿನ 500 ಸಿಸಿ ಕ್ಯಾಮೆರಾಗಳನ್ನು ಪರಿಶೀಲಿಸಿದರು. ಅದರಲ್ಲಿ ದಾಖಲಾಗಿದ್ದ ಕಾರಿನ ನಂಬರ್ ಆಧರಿಸಿ ತನಿಖೆ ನಡೆಸಲಾಯಿತು. ರಮೇಶ್ ಕುಮಾರ್ ಹೆಸರಿನಲ್ಲಿದ್ದ ಕೋಟ್ಯಂತರ ಮೌಲ್ಯದ ಆಸ್ತಿಯನ್ನು ಕಳಬಳಿಸುವುದಕ್ಕೆ ಕೊಲೆ ಮಾಡಿರುವುದಾಗಿ ಆರೋಪಿಗಳು ತನಿಖೆ ವೇಳೆ ಒಪ್ಪಿಕೊಂಡಿದ್ದಾರೆ. ಕೊಲೆ ಹೈದರಾಬಾದ್​ನಲ್ಲಿ ನಡೆದಿರುವುದರಿಂದ ಪ್ರಕರಣವನ್ನು ಮೇಡಿಪಲ್ಲಿ ಠಾಣೆಗೆ ವರ್ಗಾಯಿಸಲಾಗುವುದು.

ಓದಿ:ಜಮ್ಮುವಿನಲ್ಲಿ ಮತ್ತೆ ಗುಂಡಿನ ಸದ್ದು; ಸೇನೆ - ಭಯೋತ್ಪಾದಕರ ನಡುವೆ ಗುಂಡಿನ ಚಕಮಕಿ

ABOUT THE AUTHOR

...view details