ಕರ್ನಾಟಕ

karnataka

ETV Bharat / bharat

ಸಿಎಂ ನಿವಾಸದಿಂದಲೇ 'ಅಪಹರಣ ಡೀಲ್​' ಮಾಡ್ತಿದ್ರು ಲಾಲು​: ಸಂಬಂಧಿ ಸುಭಾಷ್​ ಯಾದವ್ ಗಂಭೀರ ಆರೋಪ - LALU KIDNAPING DEALS ALLEGATION

ಲಾಲು ಪ್ರಸಾದ್​ ಯಾದವ್​ ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಸಿಎಂ ನಿವಾಸದಿಂದಲೇ ಅಪಹರಣ ಪ್ರಕರಣಗಳಲ್ಲಿ ಅವರು ಡೀಲ್​ ನಡೆಸುತ್ತಿದ್ದರು ಎಂದು ಸಂಬಂಧಿಯೇ ಆಪಾದಿಸಿದ್ದಾರೆ.

ಸಂಬಂಧಿ ಸುಭಾಷ್​ ಯಾದವ್​, ಲಾಲು ಪ್ರಸಾದ್​ ಯಾದವ್​
ಸಂಬಂಧಿ ಸುಭಾಷ್​ ಯಾದವ್​, ಲಾಲು ಪ್ರಸಾದ್​ ಯಾದವ್​ (ETV Bharat)

By ETV Bharat Karnataka Team

Published : Feb 13, 2025, 9:16 PM IST

ಪಾಟ್ನಾ(ಬಿಹಾರ):ಬಿಹಾರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ, ಮಾಜಿ ಸಿಎಂ ಮತ್ತು ಆರ್​ಜೆಡಿ ಪಕ್ಷದ ನಾಯಕ ಲಾಲು ಪ್ರಸಾದ್​ ಯಾದವ್​ ಮೇಲೆ ಅವರ ಕುಟುಂಬ ಸದಸ್ಯರೇ ಗಂಭೀರ ಆರೋಪ ಮಾಡಿರುವುದು ರಾಜಕೀಯ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಲಾಲು ಪ್ರಸಾದ್​ ಯಾದವ್​ ಅವರು ಸಿಎಂ ಆಗಿದ್ದಾಗ ರಾಜ್ಯದಲ್ಲಿ ಜಂಗಲ್​ರಾಜ್ ಇತ್ತು. ಸಿಎಂ ನಿವಾಸದಿಂದಲೇ ಅಪಹರಣ, ಕೊಲೆ ಪ್ರಕರಣಗಳ ಇತ್ಯರ್ಥಕ್ಕೆ ಡೀಲ್​ ನಡೆಯುತ್ತಿತ್ತು. ಸಿಎಂ ಆದೇಶದ ಮೇಲೆ ಶೋರೂಮ್​​ನಿಂದ ಕಾರುಗಳು ಅಪಹರಣಕಾರರಿಗೆ ಸಿಗುತ್ತಿದ್ದವು ಎಂಬ ಗಂಭೀರ ಆಪಾದನೆಯನ್ನು ಲಾಲು ಯಾದವ್​ ಅವರ ಸಂಬಂಧಿ ಸುಭಾಷ್‌ ಯಾದವ್ ಮಾಡಿದ್ದಾರೆ.

ಒತ್ತೆಯಾಳುಗಳ ಬಿಡುಗಡೆಗೆ ಡೀಲ್:ಲಾಲು ಪ್ರಸಾದ್ ಯಾದವ್ ಅಪರಾಧಿಗಳಿಗೆ ರಕ್ಷಣೆ ನೀಡುತ್ತಿದ್ದರು. ಪ್ರಕರಣಗಳ ಇತ್ಯರ್ಥದ ಡೀಲ್​ ಮುಖ್ಯಮಂತ್ರಿಯ ನಿವಾಸದಲ್ಲೇ ನಡೆಯುತ್ತಿದ್ದವು. 1990ರ ದಶಕದಲ್ಲಿ ನಡೆದ ಅಪಹರಣಗಳಲ್ಲಿ, ಲಾಲು ಯಾದವ್ ಒತ್ತೆಯಾಳುಗಳನ್ನು ಬಿಡುಗಡೆ ಮಾಡಲು ಸುಲಿಗೆ ವ್ಯವಹಾರಗಳನ್ನು ಮಾಡುತ್ತಿದ್ದರು ಎಂದು ಅವರು ದೂರಿದ್ದಾರೆ.

ಲಾಲು ಯಾದವ್​ ಬಳಗದಲ್ಲಿ ಪೂರ್ಣಿಯಾ ಮತ್ತು ಅರಾರಿಯಾ ಅವರಿಂದ ಒಬ್ಬರ ಅಪಹರಣವಾಯಿತು. ಆ ಕೇಸನ್ನು ಯಾರ ಮೇಲೆ ಹಾಕಿದರು ಎಂಬುದು ಇಂದು ಜಗಜ್ಜಾಹೀರು. ಅದರಿಂದ ಬಂದ ಹಣವನ್ನು ಯಾರಿಗೆ ಹಂಚಲಾಯಿತು. ಜಾಕೀರ್​ ಹುಸೇನ್​ ಮೇಲೆ ಆರೋಪ ಹೊರಿಸಲಾಯಿತು. ಇದರ ಹಿಂದೆ ಲಾಲು ಯಾದವ್​​ ಇದ್ದರು. ಈ ಸತ್ಯ ಹೇಳಲು ಆರೋಪಿ ಕ್ರಿಮಿನಲ್​​ ಆರೋಪಿ ಶಹಾಬುದ್ದೀನ್​ ಈಗ ಇಲ್ಲ ಎಂದು ಅವರು ಹಿಂದಿನ ಪ್ರಕರಣವೊಂದನ್ನು ನೆನಪಿಸಿಕೊಂಡರು.

ತೇಜಸ್ವಿ ಸಿಎಂ ಆಗಲ್ಲ:ಲಾಲು ಪ್ರಸಾದ್ ಯಾದವ್ ಅವರ ಕನಸು ಎಂದಿಗೂ ನನಸಾಗುವುದಿಲ್ಲ. ತೇಜಸ್ವಿ ಯಾದವ್ ಮುಖ್ಯಮಂತ್ರಿಯಾಗಲು ಸಾಧ್ಯವಿಲ್ಲ. ತೇಜಸ್ವಿ ಯಾದವ್ ನಮ್ಮ ವಿರೋಧ ಕಟ್ಟಿಕೊಂಡು ಬೆಳೆಯಲಾರರು. ನಮ್ಮ ವಿರುದ್ಧ ಸುಳ್ಳು ಆರೋಪ ಮಾಡಿ ಪ್ರಕರಣ ದಾಖಲಿಸಲಾಗಿದೆ. ಲಾಲು ಪ್ರಸಾದ್ ಯಾದವ್ ಸಿಎಂ ಆಗಲು ನಾನು ಸಹಾಯ ಮಾಡಿದ್ದೆ ಎಂದು ಸುಭಾಷ್​ ಯಾದವ್​ ಹೇಳಿದ್ದಾರೆ.

ಸುಭಾಷ್ ಯಾದವ್ ಯಾರು?:ಸುಭಾಷ್ ಯಾದವ್ ಅವರು, ಲಾಲು ಯಾದವ್ ಅವರ ಪತ್ನಿ ರಾಬ್ರಿ ದೇವಿಯ ಕಿರಿಯ ಸಹೋದರ. 1997ರಲ್ಲಿ, ಅವರು ತಮ್ಮ ಸಹೋದರಿ ರಾಬ್ರಿಯನ್ನು ಬೆಂಬಲಿಸಲು ಆರ್‌ಜೆಡಿ ಸೇರಿದರು. 2004ರಲ್ಲಿ ಆರ್‌ಜೆಡಿಯಿಂದ ರಾಜ್ಯಸಭಾ ಸಂಸದರಾದರು. 2010ರವರೆಗೆ ರಾಜ್ಯಸಭಾ ಸದಸ್ಯರಾಗಿದ್ದರು. 2010ರಲ್ಲಿ ಪಕ್ಷಕ್ಕೆ ರಾಜೀನಾಮೆ ನೀಡಿ ಲಾಲು ಅವರಿಂದ ರಾಜಕೀಯವಾಗಿ ಬೇರ್ಪಟ್ಟರು. ಸದ್ಯ ಉದ್ಯಮಿಯಾಗಿದ್ದಾರೆ.

ಇದನ್ನೂ ಓದಿ:ಪಾಕಿಸ್ತಾನ ಪಡೆಗಳಿಂದ ಅಪ್ರಚೋದಿತ ದಾಳಿ: ಭಾರತದ ಪ್ರತಿದಾಳಿಯಲ್ಲಿ ಪಾಕ್ ಸೈನ್ಯಕ್ಕೆ ಭಾರಿ ಸಾವು -ನೋವು

ABOUT THE AUTHOR

...view details