ಕಾರು ಶೆಡ್ ಧ್ವಂಸ ಮಾಡಿ, 2 ತಾಸು ರಸ್ತೆ ತಡೆದ ಕಾಡಾನೆ: ವಿಡಿಯೋ - ಕೊಲ್ಹಾಪುರದಲ್ಲಿ ಆನೆ ಕಿರಿಕ್
ಮಹಾರಾಷ್ಟ್ರದಲ್ಲಿ ಮಳೆಯ ಆರ್ಭಟ ಒಂದೆಡೆಯಾದರೆ, ಕಾಡಾನೆಗಳು ನಗರಕ್ಕೆ ನುಗ್ಗಿ ದಾಂಧಲೆ ನಡೆಸುತ್ತಿವೆ. ಕೊಲ್ಹಾಪುರದ ಅಜರಾ ತಾಲೂಕಿನ ಗಾವ್ಸೆ ಎಂಬಲ್ಲಿ ಆನೆಯೊಂದು ಕಾರಿನ ಶೆಡ್ ಧ್ವಂಸಗೊಳಿಸಿದೆ. ಇದರಿಂದ ಅದರಲ್ಲಿದ್ದ ವಾಹನಗಳು ಜಖಂ ಆಗಿವೆ. ಇಷ್ಟಕ್ಕೇ ಬಿಡದ ಆನೆ ಪಕ್ಕದ ಜಮೀನಿಗೆ ನುಗ್ಗಿ ಬೆಳೆ ನಾಶ ಮಾಡಿದೆ. ಬಳಿಕ ರಸ್ತೆಯ ಮೇಲೆ ನಿಂತು ವಾಹನಗಳನ್ನು ಅಡ್ಡಗಟ್ಟಿದೆ. ಸುಮಾರು 2 ಗಂಟೆಗಳ ಕಾಲ ರಸ್ತೆಯಲ್ಲೇ ನಿಂತಿದ್ದ ಆನೆಯಿಂದಾಗಿ ಭಾರೀ ವಾಹನದಟ್ಟಣೆ ಉಂಟಾಗಿದೆ.