ನದಿಯಲ್ಲಿ ಸಿಲುಕಿದ ಟ್ರ್ಯಾಕ್ಟರ್.. ನೋಡ - ನೋಡುತ್ತಿದ್ದಂತೆ ಹರಿದು ಬಂದ ಪ್ರವಾಹದ ನೀರು.. ವಿಡಿಯೋ - ಗುಜರಾತ್ನಲ್ಲಿ ಭಾರಿ ಮಳೆ
ಗಾಂಧಿನಗರ (ಗುಜರಾತ್): ನದಿಯಲ್ಲಿ ನೋಡ - ನೋಡುತ್ತಿದ್ದಂತೆ ಪ್ರವಾಹದ ನೀರು ಹರಿದು ಬಂದ ಟ್ರ್ಯಾಕ್ಟರ್ವೊಂದು ಮುಳುಗಿರುವ ಘಟನೆ ಗುಜರಾತ್ನಲ್ಲಿ ನಡೆದಿದೆ. ಗಾಂಧಿನಗರ ಜಿಲ್ಲೆಯ ಧನಿಯೋಲ್ ಗ್ರಾಮದಲ್ಲಿ ಬರಿದಾದ ಖಾರಿ ನದಿಯಲ್ಲಿ ಟ್ರ್ಯಾಕ್ಟರ್ ಸಿಲುಕಿಕೊಂಡಿತ್ತು. ಏಳೆಂಟು ಜನರು ಅದನ್ನು ದಡಕ್ಕೆ ಸೇರಿಸಲು ಹರಸಾಹಸ ಪಡುತ್ತಿದ್ದರು. ಆದರೆ, ಭಾರಿ ಮಳೆಯಿಂದಾಗಿ ಇದ್ದಕ್ಕಿದ್ದಂತೆ ನದಿಗೆ ನೀರು ಹರಿದು ಬಂದಿದೆ. ಹೀಗಾಗಿ ಎಲ್ಲರೂ ಟ್ರ್ಯಾಕ್ಟರ್ನನ್ನು ಅಲ್ಲಿಯೇ ಬಿಟ್ಟು ಓಡಿ ಬಂದಿದ್ದಾರೆ. ಇದಾದ ಕೆಲ ಕ್ಷಣಗಳಲ್ಲೇ ಟ್ರ್ಯಾಕ್ಟರ್ ನೀರಿನಲ್ಲಿ ಮುಳುಗಿದೆ. ಇದರ ದೃಶ್ಯಗಳು ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿವೆ.