ಇಂದಿನಿಂದ ರಾಯ್‌ಪುರದಲ್ಲಿ ರಸ್ತೆ ಸುರಕ್ಷತೆ ವಿಶ್ವ ಸರಣಿ : ಭಾರತದ ಲೆಜೆಂಡ್ಸ್ಗೆ ಭವ್ಯ ಸ್ವಾಗತ - ಈಟಿವಿ ಭಾರತ್ ಕರ್ನಾಟಕ
ರಾಯ್‌ಪುರ(ಛತ್ತೀಸ್ಘಡ): ಇಂದಿನಿಂದ ರಾಯ್‌ಪುರದ ಶಹೀದ್ ವೀರ್ ನಾರಾಯಣ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಆರಂಭವಾಗಿದೆ. ಶಹೀದ್ ವೀರ್ ನಾರಾಯಣ ಸಿಂಗ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಮೊದಲ ದಿನದ 2 ಲೀಗ್ ಪಂದ್ಯ ಶ್ರೀಲಂಕಾ ಲೆಜೆಂಡ್ಸ್ ಮತ್ತು ಬಾಂಗ್ಲಾದೇಶ ಲೆಜೆಂಡ್ಸ್, ಇಂಗ್ಲೆಂಡ್ ಲೆಜೆಂಡ್ಸ್ ಮತ್ತು ಆಸ್ಟ್ರೇಲಿಯಾ ಲೆಜೆಂಡ್ಸ್ ನಡುವೆ ನಡೆಯಲಿದೆ. ನಿನ್ನೆ ರಾತ್ರಿ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್, ನಮನ್ ಓಜಾ, ಯೂಸುಫ್ ಪಠಾಣ್, ಇರ್ಫಾನ್ ಪಠಾಣ್ ಸೇರಿದಂತೆ ಭಾರತದ ಎಲ್ಲ ದಿಗ್ಗಜ ಆಟಗಾರರು ರಾಯ್‌ಪುರ ತಲುಪಿದ್ದಾರೆ. ರಸ್ತೆ ಸುರಕ್ಷತೆ ವಿಶ್ವ ಸರಣಿಯಲ್ಲಿ ಒಟ್ಟು 8 ತಂಡಗಳಾದ ಇಂಡಿಯಾ ಲೆಜೆಂಡ್ಸ್, ಸೌತ್ ಆಫ್ರಿಕಾ ಲೆಜೆಂಡ್ಸ್, ನ್ಯೂಜಿಲೆಂಡ್ ಲೆಜೆಂಡ್ಸ್, ಆಸ್ಟ್ರೇಲಿಯಾ ಲೆಜೆಂಡ್ಸ್, ಬಾಂಗ್ಲಾದೇಶ ಲೆಜೆಂಡ್ಸ್, ವೆಸ್ಟ್ ಇಂಡೀಸ್ ಲೆಜೆಂಡ್ಸ್, ಇಂಗ್ಲೆಂಡ್ ಲೆಜೆಂಡ್ಸ್ ಮತ್ತು ಶ್ರೀಲಂಕಾ ಲೆಜೆಂಡ್ಸ್ ಆಡಲಿದೆ.