ಭೀಕರ ರಸ್ತೆ ಅಪಘಾತಕ್ಕೆ ಕಾರಣವಾಯ್ತು ಬಿಡಾಡಿ ಗೂಳಿ.. ಸಿಸಿಟಿವಿಯಲ್ಲಿ ದೃಶ್ಯ ಸೆರೆ
ಬರ್ನಾಲ್(ಪಂಜಾಬ್): ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಕಾದಾಟ ನಡೆಸಿದ್ದ ಎರಡು ಬಿಡಾಡಿ ಗೂಳಿಗಳು ಭೀಕರ ರಸ್ತೆ ಅಪಘಾತಕ್ಕೆ ಕಾರಣವಾಗಿರುವ ಘಟನೆ ಪಂಜಾಬ್ನಲ್ಲಿ ನಡೆದಿದೆ. ಇಲ್ಲಿನ ಬರ್ನಾಲ್ನ ಹಂಡಿಯಾಯ ರಸ್ತೆಯಲ್ಲಿ ಈ ಅಪಘಾತ ಸಂಭವಿಸಿದ್ದು, ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿದೆ. ರಸ್ತೆ ಪಕ್ಕದಲ್ಲಿ ಕಾದಾಟ ನಡೆಸಿದ್ದ ಗೂಳಿ ಏಕಾಏಕಿ ರಸ್ತೆಯ ಮಧ್ಯ ಭಾಗಕ್ಕೆ ನುಗ್ಗಿರುವ ಪರಿಣಾಮ ಬೈಕ್ ಸವಾರನಿಗೆ ಗುದ್ದಿದೆ. ಹೀಗಾಗಿ, ಬೈಕ್ ಸವಾರ ನಿಯಂತ್ರಣ ಕಳೆದುಕೊಂಡು ಕಾರಿಗೆ ಡಿಕ್ಕಿ ಹೊಡೆದಿದ್ದಾನೆ. ಇದರಿಂದ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಘಟನೆಯಿಂದಾಗಿ ಸ್ಥಳೀಯ ಜನರಲ್ಲಿ ಭಯ ಆವರಿಸಿದೆ.