ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಬಂದ ಕಾಡಾನೆಗಳ ಹಿಂಡು: ರೈತ ಪ್ರಾಣ ಉಳಿಸಿಕೊಂಡಿದ್ದು ಹೇಗೆ?.. ವಿಡಿಯೋ ನೋಡಿ - ಮರ ಏರಿ ಕುಳಿತು ಪ್ರಾಣ ಉಳಿಸಿಕೊಂಡ ರೈತ
ಇಡುಕ್ಕಿ (ಕೇರಳ): ಆನೆಗಳ ಹಿಂಡಿನ ದಾಳಿಯಿಂದ ಪಾರಾಗಲು ರೈತರೊಬ್ಬರು ಮರ ಹತ್ತಿ ಒಂದೂವರೆ ಗಂಟೆಗೂ ಹೆಚ್ಚು ಕಾಲ ಕುಳಿತಿದ್ದ ಘಟನೆ ಕೇರಳದ ಇಡುಕ್ಕಿ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ಸಿಂಗುಕಂಡಂ ನಿವಾಸಿ ಸಾಜಿ ಎಂಬವರು ಸೋಮವಾರ ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಕಾಡಾನೆಗಳ ಹಿಂಡು ಬಂದಿದೆ. ಒಂದು ಹೆಣ್ಣು ಆನೆ ಮತ್ತು ಎರಡು ಮರಿಗಳೊಂದಿಗೆ ಬಂದಿದ್ದ ಆನೆ ಸಾಜಿ ಕಂಡು ದಾಳಿ ಮಾಡಲು ಬಂದಿದೆ. ಆಗ ಸಾಜಿ ಹತ್ತಿರದ ಮರವೊಂದಕ್ಕೆ ಏರಿ ಕುಳಿತು ಪ್ರಾಣ ಉಳಿಸಿಕೊಂಡಿದ್ದಾರೆ. ಆದರೆ, ಆನೆಗಳ ಹಿಂಡು ಮೇವು ಅರಸಿ ಮರದ ಕೆಳಗಡೆಯೇ ಉಳಿದಿವೆ. ಅಕ್ಕ -ಪಕ್ಕದಲ್ಲಿ ಯಾರು ಕಾಣದ ಕಾರಣ ಒಂದೂವರೆ ಗಂಟೆಗೂ ಹೆಚ್ಚು ಕಾಲ ಮರದಲ್ಲಿಯೇ ಸಾಜಿ ಕುಳಿತಿದ್ದಾರೆ. ನಂತರ ಸಹಾಯಕ್ಕಾಗಿ ಕೂಗಿದಾಗ ಕೆಲ ಸ್ಥಳೀಯರು ಗಮನಿಸಿ, ಅರಣ್ಯಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಸ್ಥಳೀಯರು ಮತ್ತು ಅರಣ್ಯಾಧಿಕಾರಿಗಳು ಸ್ಥಳಕ್ಕೆ ಧಾವಿಸಿ ಪಟಾಕಿ ಸಿಡಿಸಿ ಆನೆಗಳ ಹಿಂಡನ್ನು ಓಡಿಸಿ ಸಾಜಿಯನ್ನು ರಕ್ಷಿಸಿದ್ದಾರೆ.