ಮಾತಾ ವೈಷ್ಣೋದೇವಿ ದೇಗುಲ ಬಳಿ ಹಠಾತ್ ಮಳೆಗೆ ಭಾರೀ ಪ್ರವಾಹ .. ವಿಡಿಯೋ ನೋಡಿ - ಯಾತ್ರಾರ್ಥಿಗಳ ಭೇಟಿ ತಾತ್ಕಾಲಿಕವಾಗಿ ಸ್ಥಗಿತ
ಹಠಾತ್ ಸುರಿದ ಭಾರಿ ಮಳೆಯಿಂದಾಗಿ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯ ಮಾತಾ ವೈಷ್ಣೋದೇವಿ ದೇಗುಲ ಬಳಿ ಭಾರೀ ಪ್ರವಾಹ ಉಂಟಾಗಿದೆ. ಇದರಿಂದ ದೇವಸ್ಥಾನಕ್ಕೆ ಯಾತ್ರಾರ್ಥಿಗಳ ಭೇಟಿ ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ. ದೇಗುಲದಿಂದ ಹೊರಡುವ ಭಕ್ತರಿಗೆ ಮಾತ್ರ ಅವಕಾಶ ನೀಡಲಾಗಿದೆ. ಪ್ರವಾಹದಿಂದಾಗಿ ಈವರೆಗೂ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಜುಲೈನಲ್ಲಿ ಅಮರನಾಥದ ಪವಿತ್ರ ಗುಹೆಯ ಪ್ರದೇಶದಲ್ಲಿ ಮೇಘಸ್ಫೋಟ ಸಂಭವಿಸಿ ಭಕ್ತರು ಪರದಾಡುವಂತಾಗಿತ್ತು.