ಶಿರಸಿಯಲ್ಲಿ ಉಡ ಬೇಟೆಯಾಡಿದ ಕಾಳಿಂಗ ಸರ್ಪ: ವಿಡಿಯೋ ವೈರಲ್ - ಈಟಿವಿ ಭಾರತ್ ಕನ್ನಡ ಸುದ್ದಿ
ಶಿರಸಿ: ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಉಡವನ್ನು ಬೇಟೆಯಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಯಾಣ ಕ್ರಾಸ್ ಬಳಿ ನಡೆದಿದೆ. ಇದೀಗ ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸುಮಾರು ಒಂದು ಗಂಟೆಗೂ ಅಧಿಕ ಕಾಲ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದು ಉಡವನ್ನು ನುಂಗಲು ಯತ್ನಿಸಿ ವಿಫಲವಾಗಿದೆ. ಉಡದ ಗಾತ್ರವೂ ದೊಡ್ಡದಾದ್ದರಿಂದ ಹಾಗೂ ಕಲ್ಲು ಬಂಡೆಗೆ ಉಡದ ಬಾಲ ಸಿಲುಕಿದ್ದರಿಂದ ಕಾಳಿಂಗ ಸರ್ಪಕ್ಕೆ ಉಡವನ್ನು ನುಂಗಲಾಗದೇ ಅರ್ಧ ನುಂಗಿದ ಉಡವನ್ನು ವಾಪಸ್ ಹೊರಹಾಕಿದೆ. ಕಾಳಿಂಗ ಸರ್ಪದ ಬೇಟೆಯಿಂದ ಉಡವೂ ಸಾವನ್ನಪ್ಪಿದೆ. ಬೈಕ್ ಸವಾರನಾದ ಸ್ಥಳೀಯ ಅನಂತಮೂರ್ತಿ ಮತ್ತಿಘಟ್ಟ ಎನ್ನುವವರಿಗೆ ಈ ಉಡವನ್ನು ನುಂಗುತ್ತಿರುವ ಕಾಳಿಂಗ ಸರ್ಪ ಕಣ್ಣಿಗೆ ಬಿದ್ದಿದ್ದು, ಅವರು ತಮ್ಮ ಮೊಬೈಲ್ನಲ್ಲಿ ಈ ದೃಶ್ಯವನ್ನು ಸೆರೆ ಹಿಡಿದಿದ್ದಾರೆ.