ವಿಷ ಏರಿ ಮರಿ ಸತ್ತಿತು, ಕೊಂದ ನಾಗರ ಎದುರೇ ಅದು ರೋಧಿಸುತ್ತಲಿತ್ತು! ತಾಯಿ ಅಲ್ವೇ.. - kannadanews'
ತಾಯಿ ಹೃದಯವೇ ಹಾಗೇ. ಮಕ್ಕಳಿಗಾಗಿ ಪ್ರಾಣ ಕೊಡಲು ಸಿದ್ಧವಿರುತ್ತೆ. ಶಿವಮೊಗ್ಗ ನಗರದ ಗೋಪಾಲಗೌಡ ಬಡಾವಣೆಯ ಒಂದನೇ ಮುಖ್ಯ ರಸ್ತೆಯ ಮನೆಯಲ್ಲಿ ಇಂತಹ ಘಟನೆಯೊಂದು ನಡೆದಿದೆ. ನಾಗರಹಾವೊಂದು ರಾಜೇಂದ್ರ ಎಂಬುವರ ಮನೆಯೊಳಗೆ ಬಂದು ಮೂಲೆಯಲ್ಲಿದ್ದ ಮರಿ ಬೆಕ್ಕನ್ನ ಕಚ್ಚಿ ಸಾಯಿಸಿತ್ತು. ಅದನ್ನ ಕಣ್ಣಾರೆ ಕಂಡ ತಾಯಿಬೆಕ್ಕು ಎಲ್ಲಿಯೂ ಕದಲದೆ ತನ್ನ ಎದುರುಗಡೆಯೇ ಹಾವು ಇದ್ದರೂ ಸಹ ತನ್ನ ಜೀವ ಲೆಕ್ಕಿಸದೇ ಆ ಮರಿ ಬೆಕ್ಕಿನ ಬಳಿ ಕುಳಿತು ರೋಧಿಸುವ ದೃಶ್ಯ ಮನ ಕಲುಕಿತು.
Last Updated : May 21, 2019, 11:34 PM IST