ಅರಬ್ಬಿ ಸಮುದ್ರದಲ್ಲಿ ಬೋಟ್ ಮುಳುಗಡೆ... ಐವರು ಮೀನುಗಾರರ ರಕ್ಷಣೆ - mechanical boat
ಮೀನುಗಾರಿಕೆಗೆ ತೆರಳುತ್ತಿದ್ದ ಯಾಂತ್ರಿಕ ಬೋಟ್ ಮುಳುಗಡೆಯಾಗಿ ಐವರು ಮೀನುಗಾರರು ಅದೃಷ್ಟವಶಾತ್ ಪ್ರಾಣಾಪಯದಿಂದ ಪಾರಾಗಿರುವ ಘಟನೆ ಭಟ್ಕಳ ಸಮೀಪದ ಅರಬ್ಬಿ ಸಮುದ್ರದಲ್ಲಿ ಇಂದು ನಡೆದಿದೆ. ಭಟ್ಕಳ ತಾಲೂಕಿನ ರಾಘವೇಂದ್ರ ಖಾರ್ವಿ ಎಂಬುವವರಿಗೆ ಸೇರಿದ ಶ್ರೀ ಲಕ್ಷ್ಮೀವೆಂಕಟೇಶ ಹೆಸರಿನ ಯಾಂತ್ರಿಕ ಬೋಟ್ ಮೀನುಗಾರಿಕೆಗೆ ತೆರಳುತ್ತಿದ್ದಾಗ ಮುಳುಗಡೆಯಾಗಿದೆ. ಇನ್ನು ಬೋಟಿನಲ್ಲಿದ್ದ ರಾಘವೇಂದ್ರ, ಚೇತನ, ಉದಯಕುಮಾರ, ಶನಿಯಾರ, ಸುಬ್ರಹ್ಮಣ್ಯ ಎಂಬ ಐವರು ಮೀನುಗಾರರನ್ನು ಎರಡು ಯಾಂತ್ರಿಕ ಬೋಟಿನ ಮೂಲಕ ರಕ್ಷಣೆ ಮಾಡಲಾಗಿದೆ.