ಕರ್ನಾಟಕ

karnataka

By

Published : Sep 10, 2022, 1:08 PM IST

ETV Bharat / videos

ವಾರಂಗಲ್​​ನ 'ಬಾಹುಬಲಿ'.. 150 ಕೆಜಿ ಗೊಬ್ಬರದ ಚೀಲ ಹೊತ್ತು ನಡೆಯುವ ಯುವಕ!

ವಾರಂಗಲ್​​​(ತೆಲಂಗಾಣ): 27 ವರ್ಷದ ಯುವಕನೋರ್ವ ಬರೋಬ್ಬರಿ 150 ಕೆಜಿ ತೂಕದ ಗೊಬ್ಬರದ ಚೀಲ ಹೊತ್ತು ನಡೆಯುತ್ತಿರುವ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್​ ಆಗಿದೆ. ತೆಲಂಗಾಣದ ವಾರಂಗಲ್​​ನ ಯುವಕ ಅನಿಲ್​(27) ಚೆನ್ನರಾವ್​ ಪೇಟ್​ ಮಂಡಲದಲ್ಲಿ ವಾಸವಾಗಿದ್ದು, 50 ಕೆಜಿ ತೂಕದ ಮೂರು ಯೂರಿಯಾ ಚೀಲ ಹೊತ್ತು ಸಾಗುತ್ತಾರೆ. ಭತ್ತದ ಗದ್ದೆಗೆ ಗೊಬ್ಬರ ಹಾಕಲು ತಲೆಯ ಮೇಲೆ ಚೀಲ ಹೊತ್ತುಕೊಂಡು ಹೋಗುತ್ತಿರುವಾಗ ಸ್ಥಳೀಯರು ವಿಡಿಯೋ ಸೆರೆಹಿಡಿದು, ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಮಾಡಿದ್ದಾರೆ. ಇದಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದು, ಈತ ವಾರಂಗಲ್​​ನ ಬಾಹುಬಲಿ ಎಂದು ಕರೆದಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಅನಿಲ್ ಖುದ್ದಾಗಿ ಪ್ರತಿಕ್ರಿಯೆ ನೀಡಿದ್ದು, ಈ ರೀತಿ ಭಾರ ಹೊರುವುದು ತಮಗೆ ಅಭ್ಯಾಸವಾಗಿದ್ದು, ಪ್ರತಿದಿನ ವ್ಯಾಯಾಮ ಸಹ ಮಾಡುವುದಾಗಿ ಹೇಳಿದ್ದಾರೆ. ಇದರ ಜೊತೆಗೆ ಬಾಕ್ಸರ್ ಆಗಬೇಕೆಂಬ ಆಸೆ ಇದೆ ಎಂದಿದ್ದಾರೆ.

ABOUT THE AUTHOR

...view details