ಹುಡುಗಿಯರ ಚುಡಾಯಿಸುತ್ತಿದ್ದ ಬೀದಿ ಕಾಮಣ್ಣರಿಗೆ ಬಿತ್ತು ಧರ್ಮದೇಟು! - ಚಿಕ್ಕಬಳ್ಳಾಪುರ ಕಾಮುಕರಿಗೆ ಏಟು
ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣದ ಬಸ್ ನಿಲ್ದಾಣದಲ್ಲಿ ಕಾಲೇಜು ಯುವತಿಯರನ್ನು ಚುಡಾಯಿಸುತಿದ್ದ ವೇಳೆ ಗಮನಿಸಿದ ಸಾರ್ವಜನಿಕರು ಪುಂಡರನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಹಲವಾರು ದಿನಗಳಿಂದ ಆಂಧ್ರಪ್ರದೇಶದ ಕೊಡೂರು ಮೂಲದ ನಾಲ್ಕೈದು ಜನ ಬೀದಿ ಕಾಮಣ್ಣರು ಬಾಗೇಪಲ್ಲಿ ಪಟ್ಟಣದಲ್ಲಿ ಕಾಲೇಜಿಗೆ ಹೋಗುತಿದ್ದ ಯುವತಿಯರಿಗೆ ಪದೇ ಪದೆ ಕಿರುಕುಳ ನೀಡುತಿದ್ದರು. ಯುವತಿಯರು ಈ ವಿಚಾರವನ್ನು ಸಾರ್ವಜನಿಕರಿಗೆ ಹೇಳಿಕೊಂಡಿದ್ದು, ಪುಂಡರು ಚುಡಾಯಿಸುವ ವೇಳೆ ರೆಡ್ಹ್ಯಾಂಡ್ ಆಗಿ ಸಿಕ್ಕಿಬಿದ್ದಿದರ ಪರಿಣಾಮ ಹಿಗ್ಗಾ ಮುಗ್ಗ ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಪುಂಡರಿಗೆ ಥಳಿಸಿದ ಘಟನೆಯನ್ನು ಸ್ಥಳೀಯರು ವಿಡಿಯೋ ಚಿತ್ರೀಕರಣ ಮಾಡಿದ್ದಾರೆ.