ದೇವರಿಗೆ ಕೈ ಮುಗಿದು ತಟ್ಟೆಯಲ್ಲಿದ್ದ ಮಂಗಳಾರತಿ ದುಡ್ಡು ಎಗರಿಸಿದ ಮಹಿಳೆ - Vijayanayaka Temple in Madikeri
ಕೊಡಗು: ಮಹಿಳೆಯೊಬ್ಬಳು ದೇವರಿಗೆ ಕೈ ಮುಗಿದು ತಟ್ಟೆಯಲ್ಲಿದ್ದ ಮಂಗಳಾರತಿ ದುಡ್ಡು ಎಗರಿಸಿರುವ ಘಟನೆ ಮಡಿಕೇರಿಯ ವಿಜಯ ವಿನಾಯಕ ದೇವಸ್ಥಾನದಲ್ಲಿ ನಡೆದಿದೆ. ದೇಗುಲಕ್ಕೆ ಆಗಮಿಸಿದ ಈಕೆ ಮೊದಲು ದೇವರಿಗೆ ಕೈಮುಗಿದು ಸುತ್ತಮುತ್ತ ನೋಡಿದ್ದಾಳೆ. ಯಾರೂ ಇಲ್ಲದಿರುವುದನ್ನು ಗಮನಿಸಿ, ತನ್ನ ಎದುರಿಗಿದ್ದ ತಟ್ಟೆಯಲ್ಲಿ ಭಕ್ತರು ಹಾಕಿರುವ ದುಡ್ಡನ್ನು ತೆಗೆದು ಬ್ಯಾಗಿಗೆ ತುಂಬಿಸಿಕೊಂಡಿದ್ದಾಳೆ. ಬಳಿಕ ಗರ್ಭಗುಡಿಗೆ ಒಂದು ಸುತ್ತು ಪ್ರದಕ್ಷಿಣೆ ಹಾಕಿದ್ದಾಳೆ. ಹೀಗೆ ಒಮ್ಮೆ ದುಡ್ಡು ಎಗರಿಸಿದ ಬಳಿಕ, ಕುಂಕುಮ ಪಡೆದ ನಂತರ ಮತ್ತೊಮ್ಮೆ ದುಡ್ಡು ಕದ್ದಿದ್ದಾಳೆ. ಆ ನಂತರ ಹೊರಬಂದು ಪರಾರಿಯಾಗಲು ಬೈಕಿನಲ್ಲಿ ಲಿಫ್ಟ್ ಕೇಳಿದ್ದಾಳೆ. ಅದು ಸಾಧ್ಯವಾಗದಿದ್ದಾಗ ಧಾವಂತದಿಂದ ಎಸ್ಕೇಪ್ ಆಗಿದ್ದಾಳೆ. ಅಕ್ಟೋಬರ್ 12 ರಂದು ಈ ಘಟನೆ ನಡೆದಿದ್ದು, ಕೃತ್ಯದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ನಿನ್ನೆ ಸಂಜೆ ಸಿಸಿಟಿವಿ ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.