ತ್ಯಾಜ್ಯ ತಿಂದು ಜೀವಕ್ಕೆ ಕುತ್ತುತಂದುಕೊಂಡ ವನ್ಯಮೃಗ... ಇದಕ್ಕಿಲ್ಲವೇ ಪರಿಹಾರ? - ಅರಣ್ಯ ಇಲಾಖೆಯ ನಿರ್ಲಕ್ಷ
ಕಾಡುನಾಶದಿಂದಾಗಿ ಆಹಾರವನ್ನು ಹುಡುಕಿಕೊಂಡು ಕಾಡಿನಿಂದ ನಾಡಿನೆಡೆಗೆ ಕಾಡು ಪ್ರಾಣಿಗಳು ಬರುತ್ತಿದ್ದು, ಅವುಗಳ ಪ್ರಾಣಕ್ಕೆ ಕುತ್ತು ಬರುವಂತಹ ಸ್ಥಿತಿ ನಿರ್ಮಾಣವಾಗಿದೆ. ಇಂತಹ ದುರಂತಕ್ಕೆ ನಿದರ್ಶನ ಎಂಬಂತೆ ನಗರದ ಕಸ ವಿಲೇವಾರಿ ಘಟಕದಲ್ಲಿ ರಾಶಿ ಹಾಕಲಾಗುವ ತ್ಯಾಜ್ಯ ತಿನ್ನಲು ಬಂದ ಕಡವೆಯೊಂದು ಉರುಳಿಗೆ(ಕುಣಿಕೆ) ಸಿಲುಕಿ ನಡೆಯಲಾಗದ ಸ್ಥಿತಿಗೆ ತಲುಪಿದೆ.