ಸಿ.ಪಿ. ಯೋಗೇಶ್ವರ್ಗೆ ಸಚಿವ ಸ್ಥಾನ ಏಕೆ ಕೊಡಬೇಕು: ಹೆಚ್. ವಿಶ್ವನಾಥ್ ಪ್ರಶ್ನೆ - ನಾಳೆ ಸಚಿವ ಸಂಪುಟ ವಿಸ್ತರಣೆ
ಮೈಸೂರು: ಮಾಜಿ ಶಾಸಕ ಸಿ.ಪಿ. ಯೋಗೇಶ್ವರ್ಗೆ ಸಚಿವ ಸ್ಥಾನ ಏಕೆ ಕೊಡಬೇಕು? ಇಷ್ಟಕ್ಕೂ ಅವರ ತ್ಯಾಗ ಏನು? ಸಚಿವ ಸ್ಥಾನಕ್ಕೂ ಅವರಿಗೂ ಸಂಬಂಧ ಇಲ್ಲವೆಂದು ಮಾಜಿ ಸಚಿವ ಹೆಚ್. ವಿಶ್ವನಾಥ್ ಕಿಡಿಕಾರಿದ್ದಾರೆ. ನಾಳೆ ಬೆಳಗ್ಗೆ ಸಂಪುಟ ವಿಸ್ತರಣೆಯಾಗಲಿದೆ. ನಮ್ಮಿಂದ ಬಿಜೆಪಿ ಅಧಿಕಾರಕ್ಕೆ ಬಂದಿದೆ. ಗೆದ್ದ ನಮ್ಮ ಸ್ನೇಹಿತರು ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಾನೂ ಕೂಡ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದೇನೆ. ಸರ್ಕಾರ ರಚನೆಗೆ ಕಾರಣರಾದ ತನಗೆ ಮತ್ತು ಎಂಟಿಬಿ ನಾಗರಾಜ್ ಸಚಿವ ಸ್ಥಾನ ಕೊಡಲು ತಕರಾರಿಲ್ಲ. ಆದರೆ, ಯೋಗೇಶ್ವರ್ಗೆ ಕೊಡುವುದಕ್ಕೆ ವಿರೋಧವಿದೆ ಎಂದರು.