ಬೆಂಗಳೂರಲ್ಲಿ ವಿಜಯ ದಶಮಿ ಸಂಪನ್ನ, ಭಕ್ತಿಭಾವದಲ್ಲಿ ಮಿಂದೆದ್ದ ಉದ್ಯಾನನಗರಿ ಜನತೆ
ಬೆಂಗಳೂರು: ನವರಾತ್ರಿ ಹಿನ್ನೆಲೆಯಲ್ಲಿ 9 ದಿನಗಳ ಕಾಲ ನವದುರ್ಗೆಯರನ್ನು ಎಲ್ಲೆಡೆ ಆರಾಧನೆ ಮಾಡಲಾಗಿತ್ತು. ಇವತ್ತು ವಿಜಯದಶಮಿ ಸಂಭ್ರಮ. ಉದ್ಯಾನ ನಗರಿಯಲ್ಲೂ ಎಲ್ಲೆಡೆ ಹಬ್ಬದ ಸಡಗರ ಜೋರಾಗಿತ್ತು. ನಗರದ ಇತಿಹಾಸ ಪ್ರಸಿದ್ಧ ಬನಶಂಕರಿ ದೇವಾಲಯದಲ್ಲಿ ದೇವಿಯನ್ನು ಹೂವು ಹಣ್ಣುಗಳಿಂದ ಅಲಂಕರಿಸಲಾಗಿತ್ತು. ಬನಶಂಕರಿ ದೇವಿಯ ದರ್ಶನ ಮಾಡಿ ಭಕ್ತರು ಪುನೀತರಾದರು. ಮಲ್ಲೇಶ್ವರಂನ ಗಂಗಮ್ಮ ದೇವಿಗೆ ವಿಶೇಷ ಅಲಂಕಾರ ಮಾಡಲಾಗಿತ್ತು. ಅತ್ತ ಮಾಗಡಿ ರಸ್ತೆಯ ಮಾರಮ್ಮ ದೇಗುಲದಲ್ಲೂ 9 ದಿನಗಳ ಕಾಲ ಬಗೆಬಗೆ ಅಲಂಕಾರಗಳಿಂದ ಕಂಗೊಳಿಸುತ್ತಿದ್ದ ದೇವಿಯ ಉತ್ಸವ ಮೂರ್ತಿಯನ್ನು ಪುನಃ ಗರ್ಭಗುಡಿಯಲ್ಲಿ ಪ್ರತಿಷ್ಠಾಪನೆ ಮಾಡಲಾಗಿದೆ.