ಕೊರೊನಾ ನಡುವೆ ಹಾವೇರಿಯಲ್ಲಿ ವರಮಹಾಲಕ್ಷ್ಮಿ ಹಬ್ಬ - Varamahalakshmi festival in haveri
ಜಿಲ್ಲೆಯಾದ್ಯಂತ ಸಡಗರ, ಸಂಭ್ರಮದಿಂದ ವರಮಹಾಲಕ್ಷ್ಮಿ ಹಬ್ಬ ಆಚರಿಸಲಾಗಿದೆ. ಮನೆಗಳಲ್ಲಿ ವರಮಹಾಲಕ್ಷ್ಮಿ ಪ್ರತಿಷ್ಠಾಪನೆ ಮಾಡಿದ್ದ ಮಹಿಳೆಯರು ಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಆಭರಣಗಳಿಂದ ದೇವಿಯನ್ನು ಸಿಂಗರಿಸಿ ಸಂಭ್ರಮಿಸಿದರು. ಕೊರೊನಾ ಭೀತಿ ಮತ್ತು ಬೆಲೆ ಏರಿಕೆ ನಡುವೆ ಹಬ್ಬಾಚರಣೆ ನಡೆದಿದೆ.