ಇಡಿ ತನಿಖೆಯಲ್ಲಿ ಡಿಕೆಶಿಗೆ ಜಯ: ಯುಟಿ ಖಾದರ್ ವಿಶ್ವಾಸ - ಯುಟಿ ಖಾದರ್
ಮಂಗಳೂರು: ಇಡಿ ತನಿಖೆ ಎದುರಿಸುತ್ತಿರುವ ಡಿ.ಕೆ ಶಿವಕುಮಾರ್ ಕಾನೂನು ಹೋರಾಟದಲ್ಲಿ ಜಯ ಗಳಿಸುತ್ತಾರೆ ಎಂದು ಮಾಜಿ ಸಚಿವ ಯು ಟಿ ಖಾದರ್ ವಿಶ್ವಾಸ ವ್ಯಕ್ತಪಡಿಸಿದರು. ಮಂಗಳೂರಿನಲ್ಲಿ ಮಾತನಾಡಿದ ಅವರು ಡಿ.ಕೆ ಶಿವಕುಮಾರ್ ಜೊತೆಗೆ ಪಕ್ಷ ನಿಲ್ಲುತ್ತದೆ. ದೇಶದಲ್ಲಿ ಬೇರೆ ಬೇರೆ ಕಡೆ ಈ ರೀತಿ ರಾಜಕೀಯ ಪ್ರೇರಿತ ಷಡ್ಯಂತ್ರ ನಡೆಯುತ್ತಲೆ ಇದೆ. ಡಿ ಕೆ ಶಿವಕುಮಾರ್ ಕಾನೂನು ಹೋರಾಟದಲ್ಲಿ ಜಯಗಳಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.