ಗಿಡಗಳಿಗೆ ನೀರು ಹಾಯಿಸಿ ಕರ್ತವ್ಯದ ನಡುವೆಯೂ ಪರಿಸರ ಕಾಳಜಿ ಮೆರೆದ ಟ್ರಾಫಿಕ್ ಪೊಲೀಸರು - ವಿಜಯಪುರ ಲೆಟೆಸ್ಟ್ ನ್ಯೂಸ್
ಲಾಕ್ಡೌನ್ ಕರ್ತವ್ಯದ ನಡುವೆ ಸಸಿಗಳಿಗೆ ನೀರುಣಿಸುವ ಮೂಲಕ ಪೊಲೀಸರು ಪರಿಸರ ಕಾಳಜಿ ಮೆರೆದಿದ್ದಾರೆ.ವಿಜಯಪುರ ನಗರದ ಬಸವೇಶ್ವರ ವೃತ್ತದ ಅಲಂಕಾರಿಕ ಸಸಿಗಳು ಬಿಸಿಲಿಗೆ ಬಾಡುತ್ತಿರುವುದನ್ನ ಗಮಿಸಿದ ಕರ್ತವ್ಯ ನಿರತ ಟ್ರಾಫಿಕ್ ಪೊಲೀಸರು ವೃತ್ತದಲ್ಲಿರುವ ನೀರಿನ ನಲ್ಲಿಗೆ ಪೈಪ್ ಜೋಡಿಸಿ ಸಸಿಗಳಿಗೆ ನೀರು ಹಾಯಿಸಿದ್ದಾರೆ. ಕಳೆದ ಒಂದು ವಾರದಿಂದ ನಗರದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಲಾಕ್ಡೌನ್ ನಡುವೆ ಸರಿಯಾಗಿ ವೃತ್ತದ ಅಲಂಕಾರಿಕ ಸಸಿಗಳಿಗೆ ನೀರನ್ನು ಹಾಕಿರಲಿಲ್ಲ. ಇದನ್ನ ಗಮನಿಸಿ ಟ್ರಾಫಿಕ್ ಪೊಲೀಸರು ಪರಿಸರ ಕಾಳಜಿ ಮೆರೆದಿದ್ದಾರೆ.