ಲಾಕ್‌ಡೌನ್ ನಿರ್ಲಕ್ಷಿಸಿ ಈಜು ಹೊಡೆಯಲು ಹೋದ ಯುವಕರಿಗೆ ಪೊಲೀಸರಿಂದ ಬಸ್ಕಿ ಶಿಕ್ಷೆ - ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವಂತೆ ಬುದ್ದಿವಾದ
ಲಾಕ್‌ಡೌನ್ ಜಾರಿಯಲ್ಲಿರುವುದನ್ನು ಗಣನೆಗೆ ತೆಗೆದುಕೊಳ್ಳದೆ ಚಿಕ್ಕಬಳ್ಳಾಪುರ ತಾಲೂಕಿನ ಹರಿಹರಪುರದ ಯುವಕರು ಸಾಮೂಹಿಕವಾಗಿ ಈಜು ಹೊಡೆಯಲು ಹೋಗಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ಯುವಕರಿಗೆ ರಸ್ತೆಯಲ್ಲಿಯೇ ಪೊಲೀಸರು ಲಾಠಿ ಹಿಡಿದು ಬಸ್ಕಿ ಶಿಕ್ಷೆ ನೀಡಿದ್ದಾರೆ. ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಬುದ್ದಿವಾದ ಹೇಳಿ ಮನೆಗೆ ಕಳುಹಿಸಿದ್ದಾರೆ.