ಮುಂದೆಯೂ ಅನರ್ಹ ಶಾಸಕರ ಪರವೇ ತೀರ್ಪು ಬರಲಿದೆ : ಎಂ.ಪಿ ರೇಣುಕಾಚಾರ್ಯ ವಿಶ್ವಾಸ - ಇತ್ತೀಚಿನ ಬೆಂಗಳೂರು ಸುದ್ದಿ
ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹವಾಗಿದ್ದು, ಮುಂದೆಯೂ ಅನರ್ಹ ಶಾಸಕರ ಪರವೇ ತೀರ್ಪು ಬರಲಿದೆಯೆಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಹೇಳಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಹೊರ ಬರುತ್ತಿದ್ದಂತೆ ಸಿಎಂ ನಿವಾಸ ಧವಳಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರೇಣುಕಾಚಾರ್ಯ, ತಾತ್ಕಾಲಿಕವಾಗಿ ಚುನಾವಣೆ ಮುಂದೂಡಿದ್ದಾರೆ. ಇವತ್ತಲ್ಲ ನಾಳೆ ಚುನಾವಣೆ ಆಗುತ್ತದೆ, ಸಿಎಂ ಯಡಿಯೂರಪ್ಪ ಅವರಿಗೆ ಯಾವುದೇ ಆತಂಕವಿಲ್ಲ, ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲುವ ವಿಶ್ವಾಸವಿದೆಯೆಂದರು. ಸ್ಪೀಕರ್ ರಾಜೀನಾಮೆ ನೀಡಿದ ಶಾಸಕರನ್ನು ಅನರ್ಹಗೊಳಿಸಿ ಆದೇಶ ನೀಡಿದ್ದರು ಆದರೀಗ ಸುಪ್ರೀಂಕೋರ್ಟ್ ನೀಡಿದ ಆದೇಶ ಸ್ವಾಗತಾರ್ಹ ಎಂದು ತಿಳಿಸಿದರು.