ಶಿರಾ ಮತ ಎಣಿಕೆ ಕೇಂದ್ರಕ್ಕೆ ಪಕ್ಷೇತರ ಅಭ್ಯರ್ಥಿಗೆ ಪ್ರವೇಶ ನಿರಾಕರಿಸಿದ ಸಿಬ್ಬಂದಿ - ಪಕ್ಷೇತರ ಅಭ್ಯರ್ಥಿ ಅಂಬರೋಸ್ ಡಿ
ಶಿರಾ ಉಪಚುನಾವಣೆ ಮತ ಎಣಿಕೆ ಕೇಂದ್ರಕ್ಕೆ ಪಕ್ಷೇತರ ಅಭ್ಯರ್ಥಿ ಅಂಬರೋಸ್ ಡಿ ಅವರ ಪ್ರವೇಶಕ್ಕೆ ಸಿಬ್ಬಂದಿ ನಿರಾಕರಿಸಿದ ಘಟನೆ ನಡೆದಿದೆ. ಹಾಗಾಗಿ ಮತ ಎಣಿಕೆ ಕೇಂದ್ರದ ಬಳಿ ಅಂಬ್ರೋಸ್ ಡಿ ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಧರಣಿ ಕುಳಿತು ಮೌನ ಪ್ರತಿಭಟನೆ ನಡೆಸಿದರು. ತಕ್ಷಣ ಎಚ್ಚೆತ್ತ ಮತಗಟ್ಟೆ ಅಧಿಕಾರಿಗಳು ಅವರನ್ನು ಮತ ಎಣಿಕೆ ಕೇಂದ್ರದೊಳಗೆ ಪ್ರವೇಶಿಸಲು ಅವಕಾಶ ಮಾಡಿಕೊಟ್ಟರು.