ಬೆಳಕಿನ ಅಲಂಕಾರದಲ್ಲಿ ಕಂಗೊಳಿಸುತ್ತಿರುವ ಶ್ರೀ ಗವಿಸಿದ್ದೇಶ್ವರ ಮಠ - koppal
ಕೊಪ್ಪಳ: ಕತ್ತಲು ಅಂಧಕಾರದ ಸಂಕೇತವಾದರೆ ಬೆಳಕು ಜ್ಞಾನದ ಸಂಕೇತ. ಆದರೆ ಕತ್ತಲಿದ್ದರೆ ಬೆಳಕಿಗೆ ಬೆಲೆ, ಬೆಳಕು ಇದ್ದರೇನೆ ಕತ್ತಲಿಗೂ ಬೆಲೆ. ಈ ಕತ್ತಲು ಬೆಳಕಿನ ಸಾಂಗತ್ಯದಲ್ಲಿ ನೆರಳಿನ ಪ್ರತಿಫಲನದ ತುಂಟಾಟದ ಚೆಲುವು ಮನಮೋಹಕ. ಕೊಪ್ಪಳದ ಶ್ರೀ ಗವಿಮಠ ಈಗ ಇಂತಹ ಮನಮೋಹಕ ಅನುಭೂತಿ ನೀಡುತ್ತಿದೆ. ಶ್ರೀ ಗವಿಸಿದ್ದೇಶ್ವರ ಜಾತ್ರೆಯ ಹಿನ್ನೆಲೆಯಲ್ಲಿ ಶ್ರೀಮಠವನ್ನು ಬಣ್ಣಬಣ್ಣದ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ. ವಿದ್ಯುತ್ ದೀಪಾಲಂಕರಗೊಂಡ ಶ್ರೀಮಠದ ಸೊಬಗು ರಾತ್ರಿ ವೇಳೆ ಮನಮೋಹಕವಾಗಿ ಕಾಣುತ್ತಿದೆ. ಶ್ರೀಮಠದ ಆ ಸೌಂದರ್ಯವನ್ನು ನೀವೂ ಒಮ್ಮೆ ಕಣ್ತುಂಬಿಕೊಳ್ಳಿ..