ಹಾವೇರಿಯ ಕೆರೆಕಟ್ಟೆಗಳನ್ನು ರಂಗೇರಿಸಿದ ಬಾನಾಡಿಗಳು... ನೋಡುಗರಿಗೆ ಮನಮೋಹಕ ದೃಶ್ಯ - ಹಕ್ಕಿ
ಬೇಸಿಗೆ ಕಾಲ ಮುಗಿದು, ಇನ್ನೇನು ಮಳೆಗಾಲ ಆರಂಭವಾಗುವ ಸಮಯ. ಬತ್ತಿಹೋದ ಕೆರೆಕಟ್ಟೆಗಳಲ್ಲಿ ನೀರು ತುಂಬುವ ಸಕಾಲ. ಇಂತಹ ಪ್ರದೇಶ ಅರಸಿಕೊಂಡು ಬಾನಾಡಿಗಳು ಹಾವೇರಿ ಜಿಲ್ಲೆಗೆ ಆಗಮಿಸುತ್ತವೆ. ನೀರಿಗಿಳಿದು ಹೊಟ್ಟೆ ತುಂಬಿಸಿಕೊಳ್ಳುವ ಅವು ಮತ್ತೆ ಬೇರೆಡೆ ಪ್ರಯಾಣ ಬೆಳೆಸುತ್ತವೆ. ರಾಡಿ ನೀರಿನಲ್ಲಿ ಆಹಾರ ಹುಡುಕುವ ಈ ಹಕ್ಕಿಗಳ ಚಾಣಾಕ್ಷತನ ನೋಡುಗರನ್ನು ಕುತೂಹಲ ಕಡಲಲ್ಲಿ ತೇಲಿಸುತ್ತದೆ.